ಯೂತ್ ಕಾಂಗ್ರೆಸ್ ಅಧ್ಯಕ್ಷ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿರುವ ವಿಡಿಯೋ ವೈರಲ್
ಪಾವಗಡ: ತಾಲೂಕಿನ ಯೂತ್ ಕಾಂಗ್ರೆಸ್ ಅಧ್ಯಕ್ಷ ಸುಜೀತ್ ಮಂಗಳವಾರ ರಾತ್ರಿ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತ್ತಿದೆ.
ವಿಶ್ವೇಶ್ವರಯ್ಯ ಜಲನಿಗಮದಲ್ಲಿ ಎಂ.ಡಿ ಅಗಿರುವ ಪಾವಗಡ ತಾಲೂಕಿನ ಸಣ್ಣ ಚಿತ್ತಯ್ಯ ಅವರು ನನಗೆ ಬಿಲ್ ಹಣ ಬಿಡುಗಡೆ ಮಾಡದೆ ರಾಜಕೀಯ ಕಾರಣಗಳಿಂದ ಕಿರುಕಳ ನೀಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.
ವಿಶ್ವೇಶ್ವರಯ್ಯ ಜಲನಿಗಮ ಅಭಿವೃದ್ಧಿಯ ಅಡಿಯಲ್ಲಿ ಅನೇಕ ಕಾಮಗಾರಿಗಳು ಮಾಡಿದ ಸುಜೀತ್ ಗೆ ಬಿಲ್ ನೀಡದೆ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.





