ವಿಟ್ಲ: ಸಹೋದರನ ಮೇಲೆ ಚೂರಿ ಇರಿತ: ಇಬ್ಬರು ಗಂಭೀರ

ಕೇಪು: ಕೇಪು ಬರಕೋಡಿ ನಿವಾಸಿ ರೌಡಿ ಶೀಟರ್ ಕೇಪು ಗಣೇಶ ಎಂಬವನ ಮೇಲೆ ಸಹೋದರ ಚಂದ್ರ ಎಂಬವನು ಚಾಕು ಇರಿದ ಘಟನೆ ಕೇಪು ಗ್ರಾಮದ ಬರಕೋಡಿ ಎಂಬಲ್ಲಿ ನಡೆದಿದೆ.
ಇದಕ್ಕೆ ಪ್ರತಿಯಾಗಿ ಗಣೇಶ ಕೂಡ ಚಂದ್ರನ ಮೇಲೆ ಹಲ್ಲೆ ಮಾಡಿದ್ದಾನೆಂದು ತಿಳಿದು ಬಂದಿದೆ. ಗಾಯಾಳುಗಳಿಬ್ಬರು ಪುತ್ತೂರು ಮತ್ತು ವಿಟ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ಮಾಹಿತಿ ಪಡೆದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ.