ಬಂಟ್ವಾಳ: ಸಿಡಿಲು ಬಡಿದು ಮೂವರು ಮಹಿಳೆಯರಿಗೆ ಗಾಯ: ಹುಲ್ಲು ಕೊಯ್ಯಲು ಹೋದಾಗ ಘಟನೆ

ಬಂಟ್ವಾಳ: ಹುಲ್ಲು ಕೊಯ್ಯಲು ಹೋದ ಮೂವರು ಮಹಿಳೆಯರಿಗೆ ಸಿಡಿಲು ಬಡಿದ ಗಾಯಗೊಂಡು ಚಿಕಿತ್ಸೆಗಾಗಿ ಬಂಟ್ವಾಳ ಆಸ್ಪತ್ರೆಗೆ ದಾಖಲಾದ ಘಟನೆ ಕೊಡಂಬೆಟ್ಡು ಗ್ರಾಮದಲ್ಲಿ ನಡೆದಿದೆ.
ಕೊಡಂಬೆಟ್ಟು ಗ್ರಾಮದ ಸುಬ್ಬೊಟ್ಟು ನಿವಾಸಿಯಾದ ಅನಿತಾ ಪೂಜಾರಿ ಮತ್ತು ರಾಮಯ್ಯ ಗುರಿ ನಿವಾಸಿಯಾದ ಲೀಲಾವತಿ ಬಿನ್ ಸಿಂಗ ಹಾಗೂ ಮೋಹಿನಿ ಬಿನ್ ಸಿಂಗ ಸಿಡಿಲು ಬಡಿದು ಗಾಯವಾಗಿದ್ದು ಬಂಟ್ವಾಳ ತಾಲೂಕು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಾಮದಪದವು ಅಜ್ಜಿಬೆಟ್ಟು ಗ್ರಾಮದ ಕರೆಮಜಲು ನಿವಾಸಿ ಶೋಭಾ ಅವರ ಮನೆಗೆ ಸಿಡಿಲಿನ ಆಘಾತವಾಗಿದ್ದು, ಮನೆಯ ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗಿವೆ. ವಿದ್ಯುತ್ ಸ್ವಿಚ್ ಹಾಗೂ ವಿದ್ಯುತ್ ವಯರಿಂಗ್ ಗಳಿಗೆ ಹಾನಿಯಾಗಿದ್ದು ಅಪಾರ ನಷ್ಟವಾಗಿದೆ.
ಇರುವತ್ತೂರು ಗ್ರಾಮದ ಕುಲಾಲ್ ಎಂಬಲ್ಲಿರುವ ಜೈ ಲಕ್ಷ್ಮಿ ಅವರ ಅಡಿಕೆ ತೋಟ ಹಾಗೂ ತೆಂಗಿನ ಮರಗಳಿಗೆ ಗಾಳಿ ಮಳೆಯಿದ ಕೃಷಿ ಹಾನಿಯಾಗಿರುತ್ತದೆ. ಅಡಿಕೆ ತೋಟಗಳ ಮರಗಳು ಗಾಳಿಗೆ ಬಿದ್ದು ಅಪಾರ ನಷ್ಟವಾಗಿದೆ.