July 4, 2026

ವಿಟ್ಲ: ಸಂಬಂಧಿಕರೊಂದಿಗೆ ಸೇರಿ ಸಹೋದರನಿಗೆ ಲಕ್ಷಾಂತರ ರೂ. ವಂಚನೆ: FIR ದಾಖಲು

0
image_editor_output_image-1025221820-1717318462946.jpg

ವಿಟ್ಲ : ಸಂಬಂಧಿಕರೊಂದಿಗೆ ಸೇರಿ ಸಹೋದರನಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಶಿವಪ್ಪ ಗೌಡ (70) ನೀಡಿದ ದೂರಿನಂತೆ ಸಹೋದರಿ ಇಂದಿರಾ ಹಾಗೂ ಸಂಬಂಧಿಕರಾದ ಶುಶೀಲಾ, ದರ್ಣಪ್ಪ ಗೌಡ, ಯಮುನಾ ಹಾಗೂ ಗಂಗಾಧರ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿವಪ್ಪ ಅವರ ಸಹೋದರಿ ಇಂದಿರಾ ರವರು ಸಂಬಂಧಿಕರೊಂದಿಗೆ ಸೇರಿಕೊಂಡು ಶಿವಪ್ಪ ಅವರು ಬೆಳೆದ ಅಡಿಕೆಯನ್ನು ಮಾಣಿ ಕ್ಯಾಂಸ್ಕೋ ಸಂಸ್ಥೆಗೆ ಮಾರಾಟ ಮಾಡಿ ಶಿವಪ್ಪ ರವರ ಹೆಸರಿನಲ್ಲಿ ನಕಲಿ ಉಳಿತಾಯ ಖಾತೆಯನ್ನು ತೆರೆದು ಇಲ್ಲಿಯವರೆಗೆ 51 ಲಕ್ಷ ಹಣವನ್ನು ಅವರ ಖಾತೆಗೆ ವರ್ಗಾಯಿಸಿ ವಂಚಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!