July 4, 2026

ಇಬ್ಬರು ಬಾಲಕಿಯರು ಕೆರೆಯಲ್ಲಿ ಮುಳುಗಿ ಸಾವು

0
image_editor_output_image-1512332050-1717318332592.jpg

ಚಿಕ್ಕಬಳ್ಳಾಪುರ: ಇಬ್ಬರು ಬಾಲಕಿಯರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರೋ ಘಟನೆ ಮಂಚೇನಹಳ್ಳಿ ತಾಲೂಕಿನ ದಂಡಿಗಾನಹಳ್ಳಿ ನಡೆದಿದೆ.

ಮುಂಬೈ ಮೂಲದ ಆಲಿಯಾ ಪಾಟೀಲ್ (14) ಹಾಗೂ ಜೋಯಾ ಪಾಟಿಲ್ (14) ಮೃತ ದುರ್ದೈವಿಗಳು.

ಮುಂಬೈ ಮೂಲದ ಕುಟುಂಬಸ್ಥರು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಸಂಬಂಧಿಕರ ಮನೆಗೆ ಬಂದಿದ್ದರು. ನಿನ್ನೆ ವೀಕೆಂಡ್‌ನಲ್ಲಿ ಕುಟುಂಬ ಸಮೇತ ದಂಡಿಗಾನಹಳ್ಳಿ ಕೆರೆಗೆ ಹೋಗಿದ್ದರು.

ಬಳಿಕ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *

You may have missed

error: Content is protected !!