ಮಂಗಳೂರು: ನಮ್ಮಲ್ಲಿ ಗೋಬ್ಯಾಕ್ ಎಂದು ಹೇಳಿದವರಿಗೆ ಇನ್ನೊಂದು ಕ್ಷೇತ್ರದಲ್ಲಿ ಸೀಟು ಕೊಟ್ಟಿದ್ದಾರೆ: ಶೋಭಾ ಕರಂದ್ಲಾಜೆ ವಿರುದ್ಧ ರಘುಪತಿ ಭಟ್ ವ್ಯಂಗ್ಯ

ಮಂಗಳೂರು: ನಮ್ಮಲ್ಲಿ ಗೋಬ್ಯಾಕ್ ಎಂದು ಹೇಳಿದವರಿಗೆ ಇನ್ನೊಂದು ಕ್ಷೇತ್ರದಲ್ಲಿ ಸೀಟು ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ರಘುಪತಿ ಭಟ್ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಬಿಜೆಪಿ ನಾಯಕರ ವಿರುದ್ಧ ಮತ್ತೊಮ್ಮೆ ಕಿಡಿಕಾರಿದರು.
ಸೋತವರನ್ನು ಲೋಕಸಭೆಗೆ ನಿಲ್ಲಿಸಿದ್ದಾರೆ. ಜನಪ್ರತಿನಿಧಿಯಾಗಿ ನಾನು ಸಕ್ರಿಯವಾಗಿ ಕೆಲಸ ಮಾಡಿದವನು, ಚುನಾವಣಾ ರಾಜಕೀಯದಿಂದ ಹೊರಬರುವಷ್ಟು ವಯಸ್ಸು ನನ್ನದಲ್ಲ ಎಂದರು.
ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯ ಮಾನದಂಡ ಏನು ಎಂಬುದರ ಬಗ್ಗೆ ಪಕ್ಷ ಆತ್ಮವಿಮರ್ಶೆ ಮಾಡಬೇಕು ಎಂದು ಹೇಳಿದರು.