ಸುಳ್ಯ: ಪೇಪರ್ ಲೋಡ್ ತೆಗೆದುಕೊಂಡು ಹೋಗುವ ಲಾರಿ ಪಲ್ಟಿ

ಸುಳ್ಯ: ಪೇಪರ್ ಲೋಡ್ ತೆಗೆದುಕೊಂಡು ಹೋಗುವ ಲಾರಿಯೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಸುಳ್ಯ ಅರಂತೋಡು ಭಾಸ್ಕರ ಮನೆ ಗೇಟ್ ಬಳಿಯ ತಿರುವಿನಲ್ಲಿ ಶನಿವಾರ ರಾತ್ರಿ ನಡೆದಿದೆ.
ಈ ಲಾರಿಯು ಮಂಗಳೂರಿನಿಂದ ಮೈಸೂರಿಗೆ ಪೇಪರ್ ಲೋಡ್ ತೆಗೆದುಕೊಂಡು ಹೋಗುತ್ತಿತ್ತು. ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ಲಾರಿ ಪಲ್ಟಿ ಹೊಡೆದು ಬೀಳುತ್ತಿದ್ದಂತೆ ದೊಡ್ಡ ಶಬ್ದವಾಗಿದೆ. ಬಳಿಕ ಸ್ಥಳೀಯರು ಬಂದು ನೋಡಿದಾಗ ಲಾರಿ ಪಲ್ಟಿ ಹೊಡೆದಿರುವುದು ಕಂಡುಬಂದಿದೆ. ಬಳಿಕ ಲಾರಿಯನ್ನು ತೆರವುಗೊಳಿಸಲಾಯಿತು.