ಮೊಟ್ಟೆ ತಿನ್ನುವ ವಿಚಾರಕ್ಕೆ ದಂಪತಿ ನಡುವೆ ಜಗಳ: ಮನನೊಂದ ಪತ್ನಿ ಆತ್ಮಹತ್ಯೆ

ಬೆಂಗಳೂರು: ದಂಪತಿ ನಡುವೆ ಗಲಾಟೆಯಾಗಿ ಮನನೊಂದ ಪತ್ನಿ ಮನೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಪೂಜಾ(31) ಆತ್ಮಹತ್ಯೆಗೆ ಶರಣಾದ ಮಹಿಳೆ. ಪೊಲೀಸರು ಪತಿ ಅನಿಲ್ ಕುಮಾರ್(35)ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಊಟಕ್ಕೆ ಕುಳಿತಿದ್ದಾಗ ಮೊಟ್ಟೆ ತಿನ್ನುವ ವಿಚಾರಕ್ಕೆ ದಂಪತಿ ನಡುವೆ ಜಗಳ ಶುರುವಾಗಿದೆ. ‘ನಾನು ಮನೆ ಯಜಮಾನ, ನನಗೆ 1 ಮೊಟ್ಟೆ ಹೆಚ್ಚು ಬೇಕೆಂದು ನಡೆದ ಗಲಾಟೆಯಲ್ಲಿ, ಪತ್ನಿ ಪೂಜಾ ಮೇಲೆ ಅನಿಲ್ ಹಲ್ಲೆ ಮಾಡಿದ್ದಾನೆ.
ಪತಿ ತಾರತಮ್ಯ ಭಾವನೆಗೆ ಬೇಸತ್ತು ಪೂಜಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಧ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.
ನಂತರ ಕುಟುಂಬ ಸದಸ್ಯರಿಗೆ ಪೂಜಾ ಮೃತದೇಹವನ್ನು ಹಸ್ತಾಂತರ ಮಾಡಲಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.