ಮಾಲ್‌ನಿಂದ ಕೆಳಗೆ ಹಾರಿ ಪದವೀಧರ ಆತ್ಮಹತ್ಯೆ

ಬೆಂಗಳೂರು: ಬಿಕಾಂ ಪದವೀಧರನೊಬ್ಬ ಮೈಕೋ ಲೇಔಟ್‌ನಲ್ಲಿರುವ ವೆಗಾಸಿಟಿ ಮಾಲ್‌ನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಮೃತ ಪದವೀಧರನನ್ನ ಸುಹಾಸ್ ಅಡಿಗ (21) ಎಂದು ಗುರುತಿಸಲಾಗಿದೆ.
ಮಧ್ಯಾಹ್ನ 2.30ರ ಸುಮಾರಿಗೆ ವೆಗಾಸಿಟಿ ಮಾಲ್‌ಗೆ ಪ್ರವೇಶಿಸಿ 4ನೇ ಮಹಡಿಗೆ ಹೋಗಿ ಜನರು ನೋಡನೋಡುತ್ತಿದ್ದಂತೆಯೇ ಕೆಳಗೆ ಹಾರಿದ್ದಾರೆ. ಸುಹಾಸ್ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.