September 11, 2026

ಮಂಗಳೂರು: ಇಬ್ಬರು ಬೈಕ್ ಕಳ್ಳರ ಬಂಧನ

0
n340303032163914564576010c71f6dbe69e9ae8a5916169c7646bceaf745896e23cf0013454b20cadea398.jpg

ಮಂಗಳೂರು: ಬರ್ಕೆ ಪೊಲೀಸ್ ಠಾಣೆಯ ಪೊಲೀಸರು ಶುಕ್ರವಾರ ಇಬ್ಬರು ಬೈಕ್ ಕಳ್ಳರನ್ನು ಹಾಗೂ ಎರಡು ಬೈಕ್ ಗಳ ಸಮೇತ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಬೈಕಂಪಾಡಿಯ ಮೀನಕಳಿಯದ ಸುಮಂತ್ ಬರ್ಮನ್ (19) ಮತ್ತು ಪುತ್ತೂರು ತಾಲ್ಲೂಕಿನ ಮುಕ್ರಂಪ್ಪಾಡಿಯ ತಾರಾನಾಥ ಸಾಲಿಯಾನ್ ( 26) ಎನ್ನುವವರಾಗಿದ್ದಾರೆ.

ಆರೋಪಿಗಳಿಂದ ಹಿರೋ ಹೊಂಡಾ ಮತ್ತು ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್, ವಿವೋ ಕಂಪೆನಿಯ 2 ಟಚ್ ಸ್ರ್ಕೀನ್ ಮೊಬೈಲ್, ಜಿಯೋ ಕಂಪೆನಿಯ ಕೀ ಪ್ಯಾಡ್ ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು, ಸೊತ್ತುಗಳ ಅಂದಾಜು ಮೌಲ್ಯ 75,000 ಸಾವಿರ ರೂಪಾಯಿ ಎನ್ನಲಾಗಿದೆ.

ಬಂಧಿಸಿದ ಆರೋಪಿ ಸುಮಂತ್ ಬರ್ಮನ್ ವಿರುದ್ದ ಕಾವೂರು, ಪಣಂಬೂರು, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಹಾಗೂ ಆರೋಪಿ ತಾರಾನಾಥ ಸಾಲಿಯಾನ್ ಮೇಲೆ ಮಂಗಳೂರು ಉತ್ತರ, ಸುರತ್ಕಲ್, ಉಳ್ಳಾಲ, ಮಂ. ದಕ್ಷಿಣ, ಮಂ. ಪೂರ್ವ ಹಾಗೂ ಪುತ್ತೂರು ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳ್ಳತನ, ದರೋಡೆ, ಮಾದಕ ವಸ್ತು ಗಾಂಜಾ ಮಾರಾಟ ಮಾಡಿದ ಬಗ್ಗೆ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿರುತ್ತದೆ.

Leave a Reply

Your email address will not be published. Required fields are marked *

error: Content is protected !!