ವಿಟ್ಲ; ಹೊರೈಝನ್ ಶಾಲಾ ಪ್ರಾರಂಭೋತ್ಸವ:
ವಿಟ್ಲ ; ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲಾ ಪ್ರಾರಂಭೋತ್ಸವವು ಖತೀಬ್ ಅಬ್ಬಾಸ್ ದಾರಿಮಿಯವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ಶಾಲೆಯನ್ನು ಸಿಂಗರಿಸಿ ಹೂ ಗುಚ್ಚ, ಸಿಹಿ ತಿಂಡಿ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.
ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಉಪಾಧ್ಯಕ್ಷ ಮಹಮ್ಮದ್ ಗಮಿ,ಕೋಶಾಧಿಕಾರಿ ಶರೀಫ್ ಪೊನ್ನೋಟು, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಶಾಲಾ ಅಧ್ಯಕ್ಷ ಝುಬೈರ್ ಮಾಸ್ಟರ್, ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಪ್, ಕಾರ್ಯದರ್ಶಿ ನೋಟರಿ ಅಬೂಬಕರ್, ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು,ಸದರ್ ಉಮರ್ ಸಅದಿ,ಟ್ರಸ್ಟ್ ಗಳಾದ ಇಕ್ಬಾಲ್ ಹಳೆ ಮನೆ, ಅಝೀಝ್ ಸನ, ಹಮೀದ್ ಬದ್ರಿಯಾ, ಮುಂತಾದವರು ಉಪಸ್ಥಿತರಿದ್ದರು.