ಕಡಬ: ಸಿಆರ್ ಪಿಎಫ್ ಇನ್ಸ್ಪೆಕ್ಟರ್ ಖಾಸಿಂ ಸೇವಾ ನಿವೃತ್ತಿ: 36 ವರ್ಷಗಳ ಸೇವೆ ಸಲ್ಲಿಸಿದ್ದ ಖಾಸಿಂ
ಕಡಬ: 36 ವರ್ಷಗಳ ಸುದೀರ್ಘ ಕಾಲ ಸಿಆರ್ ಪಿಎಫ್ ಇನ್ ಸ್ಪೆಕ್ಟರ್ ಹುದ್ದೆಯಲ್ಲಿದ್ದುಕೊಂಡು ಸೇವೆ ಸಲ್ಲಿಸಿದ ಜ.ಖಾಸಿಂ ಅವರು ಇಂದು ಸೇವಾ ನಿವೃತ್ತಿಯಾಗಿದ್ದಾರೆ.
ಹಳೆನೇರೆಂಕಿ ನಿವಾಸಿಯಾಗಿರುವ ಖಾಸಿಂ ಅವರು ಹಳೆನೇರೆಂಕಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ರಾಮಕುಂಜದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಪುತ್ತೂರು ಸಂತ ಫಿಲೋಮಿನ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿರುತ್ತಾರೆ.
ಬಳಿಕ ಸಿಆರ್ ಪಿಎಫ್ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಸೇವೆಯಿಂದ ನಿವೃತ್ತಿಯಾಗಿದ್ದಾರೆ.