July 27, 2024

ಕಂಬಳಬೆಟ್ಟುವಿನಲ್ಲಿ ದರ್ಸ್ ವಿದ್ಯಾಭ್ಯಾಸ ಕೇಂದ್ರ, ಕ್ಯಾಂಟೀನ್ ಉದ್ಘಾಟನೆ

0

ವಿಟ್ಲ: ಕಂಬಳಬೆಟ್ಟು ಮುಹಿಯ್ಯದ್ದೀನ್ ಹಾಗೂ ಇಬ್ರಾಹಿಂ ಜಮಾಅತಿನ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದರ್ಸ್ ವಿದ್ಯಾಭ್ಯಾಸ ಕೇಂದ್ರ ಹಾಗೂ ಕ್ಯಾಂಟೀನ್ ವ್ಯವಸ್ಥೆಯನ್ನು ಝೈನುಲ್ ಉಲಮಾ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ರವರು ಉದ್ಘಾಟಿಸಿದರು.ನಂತರ ಮಾತನಾಡಿದ ಝೈನುಲ್ ಉಲಮಾ ಮಾಣಿ ಹಮೀದ್ ಮುಸ್ಲಿಯಾರ್ ಅವರು , ದರ್ಸ್ ವಿದ್ಯಾಭ್ಯಾಸದ ಮಹತ್ವ ಹಾಗೂ ಅದಕ್ಕೆ ಸಹಕರಿಸಿದವರಿಗೆ ಇಹ ಮತ್ತು ಪರ ಲೋಕದಲ್ಲಿ ಅಲ್ಲಾಹನು ಅನುಗ್ರಹಿಸುವ ಪ್ರತಿಫಲದ ವಿಶಾಲತೆ ಬಗ್ಗೆ ವಿವರಿಸಿ, ಸ್ಥಳೀಯರು ಹೆಚ್ಚು ಈ ಸಂಭ್ರಮವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಮುಖ್ಯ ಭಾಷಣಕಾರರಾಗಿ ಆಗಮಿಸಿದ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಅವರು ಮಾತನಾಡಿ ಗ್ರಂಥ ರಚನೆ ಮಾಡಿದ ವಿದ್ವಾಂಸರುಗಳು ಅಧ್ಯಾತ್ಮಿಕ ವಿದ್ಯಾಭ್ಯಾಸಕ್ಕೆ ಕೊನೆಯುಸಿರು ಇರುವ ತನಕ ಯಾವ ರೀತಿಯಲ್ಲಿ ತ್ಯಾಗ ಮಾಡಿದ್ದರು ಎಂಬುದನ್ನು ವಿವರಿಸಿದರು.ಕ್ಯಾಂಟೀನ್ ಕಟ್ಟಡವನ್ನು ಮರ್ಹೂಮ್ ಅಝೀಝ್ ಬದ್ರಿಯಾ ಅವರ ಮಕ್ಕಳು ನಿರ್ಮಿಸಿ ಕೊಟ್ಟರೆ, ಅಡುಗೆ ಪಾತ್ರೆಗಳು ಮತ್ತು ಇತರ ಸೌಕರ್ಯಗಳನ್ನು ಜಮಾಅತಿನ ದಾನಿಗಳು ಸೇರಿ ನೀಡಿರುತ್ತಾರೆ.ಕಂಬಳಬೆಟ್ಟು ಮುಹಿಯ್ಯದ್ದೀನ್ ಹಾಗೂ ಇಬ್ರಾಹಿಂ ಜಮಾಅತ್ ಅಧ್ಯಕ್ಷರಾದ ಡಾ| ವಿ. ಕೆ ಅಬ್ದುಲ್ ಬಷೀರ್ ಅವರು ಮಾತನಾಡಿ ಈಗಾಗಲೇ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಖತೀಬರಾದ ಇಬ್ರಾಹಿಂ ಮದನಿ, ಅಬೂ ಸ್ವಾಲಿಹ್ ಸಖಾಫಿ ಬೆಳ್ಮ, ಹಾಫಿಲ್ ಅಹ್ಮದ್ ಕಾಮಿಲ್ ಸಖಾಫಿ ಮಳಲಿ, ಮಾಜಿ ಅಧ್ಯಕ್ಷರಾದ ವಿ.ಕೆ ಖಾದರ್ ಹಾಜಿ ಬದ್ರಿಯಾ, ಮೊಯ್ದು ಹಾಜಿ ದರ್ಬಾರ್, ಉಪಾಧ್ಯಕ್ಷರಾದ ಅಬ್ದುಲ್ ರಝಾಕ್ ಬಾಂಬೆ, ಕೋಶಾಧಿಕಾರಿ ಅಬೂಬಕ್ಕರ್ ನೆಕ್ಕರೆ ಮಹಮೂದ್ ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ನಾಸಿರ್, ಶಾಂತಿ ನಗರ ಮದ್ರಸ ಅಧ್ಯಕ್ಷ ಅಬ್ದುಲ್ ರಝಾಕ್(ಮೋನು), ಹಾಜಿ ಸುನ್ನಿ ಖಾದರ್, ಜೊತೆ ಕಾರ್ಯದರ್ಶಿಗಳಾದ ಅಬ್ದುಲ್ ಗಫೂರ್, ಮುಹಮ್ಮದ್ ಯಾಸಿರ್ ಸೇರಿದಂತೆ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.ಉಮ್ಮರ್ ಸಖಾಫಿ ಕಂಬಳಬೆಟ್ಟು ಅವರು ಕಾರ್ಯಕ್ರಮ ನಿರೂಪಿಸಿದರು. ರಫೀಕ್ ದಲ್ಕಾಜೆ, ಕೋಲ್ಪೆ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!