ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ: ಸಂಸದರ ಕೊಠಡಿಯಲ್ಲಿದ್ದ ದಿಂಬು, ಹಾಸಿಗೆ ಸಹಿತ ಇತರ ವಸ್ತುಗಳನ್ನು ವಶಕ್ಕೆ ಪಡೆದ ಎಸ್ಐಟಿ ತಂಡ
ಬೆಂಗಳೂರು: ಇನ್ನು ಪ್ರಜ್ವಲ್ ಆಗಮನದ ದಿನ ಸಮೀಪಿಸುತ್ತಿದ್ದಂತೆಯೇ ಅಧಿಕಾರಿಗಳ ಸಾಕ್ಷ್ಯ ಸಂಗ್ರಹವನ್ನು ಬಲ ಪಡಿಸುತ್ತಿದ್ದಾರೆ.
ಎಸ್ ಐಟಿ, ಎಫ್‌ಎಸ್‌ಎಲ್ ತನಿಖಾ ದಳದ ಅಧಿಕಾರಿಗಳು ಪ್ರಜ್ವಲ್ ನಿವಾಸದಲ್ಲಿ ದೀರ್ಘ ಸಮಯಗಳ ಕಾಲ ನಡೆಸಿದ ಪರಿಶೀಲನೆ ಮುಂಜಾನೆ 4 ಗಂಟೆ ವೇಳೆಗೆ ಮುಗಿದಿದೆ.
ಪ್ರಜ್ವಲ್ ವಿಚಾರಣೆ ವೇಳೆ ಮಹತ್ವದ ದಾಖಲೆಯನ್ನು ಸಂಗ್ರಹಿಸಲು ತನಿಖಾ ತಂಡ ನಗರದ ಆರ್ ಸಿ ರಸ್ತೆಯಲ್ಲಿರುವ ಸಂಸದ ಪ್ರಜ್ವಲ್ ಮನೆಯನ್ನು ಪರಿಶೀಲನೆ ನಡೆಸಿದ್ದಾರೆ. ಸಂಸದರ ಮಲಗುವ ಕೊಠಡಿಯಲ್ಲಿದ್ದ ದಿಂಬು, ಹಾಸಿಗೆ, ಹೊದಿಕೆ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.