February 3, 2026

ಮೈಸೂರು: ಮೋದಿ ವಾಸ್ತವ್ಯ ಹೂಡಿದ್ದ ಹೊಟೇಲ್‌ ಬಿಲ್‌ 80 ಲಕ್ಷ ರೂ ಬಾಕಿ: ಕಾನೂನು ಕ್ರಮದ ಎಚ್ಚರಿಕೆ

0
deccanherald_2024-05_10c10758-8081-43cb-8f8f-3d4f24e242a0_file7ppapwlkoci938pz4xq.jpg

ಮೈಸೂರು: ಕಳೆದ ವರ್ಷ ಬಂಡೀಪುರ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಬಂದಾಗ ವಾಸ್ತವ್ಯ ಹೂಡಿದ್ದ ಹೊಟೇಲ್‌ನ ಬಿಲ್‌ 80 ಲಕ್ಷ ರೂ ಬಾಕಿ ಉಳಿದಿದೆ. ಈ ಹಿನ್ನೆಲೆ ಜೂನ್‌ 1 ರೊಳಗೆ ಪಾವತಿಸಿ ಇಲ್ಲವಾದರೆ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ ಎಂದು ಹೊಟೇಲ್‌ ಮಾಲೀಕರು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ 50ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಆಗ ಮೈಸೂರಿನ ಪಂಚತಾರಾ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಒಂದು ವರ್ಷ ಕಳೆದರೂ ಹೊಟೇಲ್‌ ಬಿಲ್‌ ಪಾವತಿಯಾಗಿಲ್ಲ. 18% ಬಡ್ಡಿ ಸೇರಿ ಈಗ ಬಿಲ್‌ 80 ಲಕ್ಷರೂ ಆಗಿದೆ. ಹೀಗಾಗಿ ಜೂನ್ 1ರೊಳಗೆ ಬಿಲ್ ಪಾವತಿಸಿ ಎಂದು ಹೊಟೇಲ್‌ ಮಾಲೀಕರು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ.

ಈ ಕಾರ್ಯಕ್ರಮಕ್ಕೆ ಒಟ್ಟೂ 6 ಕೋಟಿ ರೂ ಖರ್ಚಾಗಿತ್ತು ಆದರೆ ಕೇಂದ್ರ ಅರಣ್ಯ ಇಲಾಖೆಯಿಂದ ರಾಜ್ಯ ಅರಣ್ಯ ಇಲಾಖೆಗೆ 3 ಕೋಟಿ ರೂ ಮಾತ್ರ ಬಿಡುಗಡೆಯಾಗಿದ್ದು ಬಾಕಿ ಹಣ ನೀಡಿ ಎಂದು ಕೇಂದ್ರ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ.

Leave a Reply

Your email address will not be published. Required fields are marked *

error: Content is protected !!