BJP ಶಾಸಕರ ಮೊಮ್ಮಗ ಕ್ರಿಮಿನಾಶಕ ಸೇವಿಸಿ ಆತಹತ್ಯೆ
ಇಂದೋರ್: ಬಿಜೆಪಿ ಶಾಸಕರೊಬ್ಬರ ಮೊಮ್ಮಗ ವಿಷಕಾರಕ ಕ್ರಿಮಿನಾಶಕ ಸೇವಿಸಿ ಆತಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಖಿಲ್ಚಿಪುರ (ರಾಜ್‌ಗಢ) ಶಾಸಕ ಹಜಾರಿ ಲಾಲ್ ಡಾಂಗಿ ಅವರ ಮೊಮಗ ವಿಕಾಸ್ ದಂಗಿ(21) ನಿನ್ನೆ ರಾತ್ರಿ ಇಲ್ಲಿನ ಗಾಂಧಿನಗರ ಪ್ರದೇಶದ ಬಾಡಿಗೆ ವಸತಿಗೃಹದಲ್ಲಿ ಕ್ರಿಮಿನನಾಶ ಸಲ್ಫಾ ಸೇವಿಸಿ ಆತಹತ್ಯೆಗೆ ಶರಣಾಗಿದ್ದಾನೆ.
ವಿಕಾಸ್ ಡಾಂಗಿ ಇಂದೋರ್‌ನಲ್ಲಿ ಬಾಡಿಗೆ ವಸತಿಗೃಹದಲ್ಲಿ ತಂಗಿದ್ದಾಗ ಸ್ಥಳೀಯ ಕಾಲೇಜಿನಲ್ಲಿ ಎಲ್‌ಎಲ್‌ಬಿ ಕೋರ್ಸ್ ಓದುತ್ತಿದ್ದರು.ವಿಕಾಸ್‌ನ ಸ್ನೇಹಿತ ಸೋಮವಾರ ರಾತ್ರಿ ಅವನಿಗೆ ಕರೆ ಮಾಡಿದಾಗ ಪ್ರತಿಕ್ರಿಯಿಸಲಿಲ್ಲ. ನಂತರ ಸ್ಥಳಕ್ಕೆ ಹೋದಾಗ, ವಿಕಾಸ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.




