May 6, 2026

ಕಾರು ಪಲ್ಟಿ: ಮೂವರು ವಿದ್ಯಾರ್ಥಿಗಳು ಸಾವು

0
image_editor_output_image1981702021-1716277144563.jpg

ನವದೆಹಲಿ: ಕಾರು ಪಲ್ಟಿಯಾಗಿ ಮೂವರು ಇಂಡೋ – ಅಮೇರಿಕನ್‌ ಮೂಲದ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಜಾರ್ಜಿಯಾ ದೇಶದ ಅಲ್ಫರೆಟ್ಟಾದಲ್ಲಿ ನಡೆದಿರುವುದು ವರದಿಯಾಗಿದೆ.

ಘಟನೆಯಲ್ಲಿ ಮೂವರು ಭಾರತೀಯ-ಅಮೆರಿಕನ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅವರೆಲ್ಲರೂ 18 ವರ್ಷ ವಯಸ್ಸಿನವರಾಗಿದ್ದು, ಇಬ್ಬರು ಯುವತಿಯರು ಹಾಗೂ ಒಬ್ಬ ಯುವಕ ಮೃತಪಟ್ಟಿದ್ದಾನೆ.

ಮೃತ ವಿದ್ಯಾರ್ಥಿಗಳನ್ನು ಆರ್ಯನ್ ಜೋಷಿ, ಶ್ರೀಯಾ ಅವಸರಲಾ ,ಅನ್ವಿ ಶರ್ಮಾ ಎಂದು ಗುರುತಿಸಲಾಗಿದೆ.ರಿತ್ವಾಕ್ ಸೋಮೆಪಲ್ಲಿ ,ಮೊಹಮ್ಮದ್ ಲಿಯಾಕತ್ ಗಾಯಗೊಂಡ ವಿದ್ಯಾರ್ಥಿಗಳು.

Leave a Reply

Your email address will not be published. Required fields are marked *

error: Content is protected !!