March 17, 2026

ಶೌಚಾಲಯದಲ್ಲಿ ಶಿವಸೇನೆ  ಕಾರ್ಯಕರ್ತನ ಮೃತದೇಹ ಪತ್ತೆ

0
image_editor_output_image28204133-1716273610972.jpg

ಮುಂಬೈ: ಇಲ್ಲಿನ ವರ್ಲಿ ಪ್ರದೇಶದ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿವಸೇನೆ ಕಾರ್ಯಕರ್ತ ಹಾಗೂ ಏಜೆಂಟ್ ಮನೋಹರ್ ನಲ್ಗೆ (62) ಅವರ ಮೃತದೇಹ ಶೌಚಾಲಯದಲ್ಲಿ ಪತ್ತೆಯಾಗಿದೆ.

ಮನೋಹರ್ ನಲ್ಗೆಯವರು ಮತದಾನ ಮುಗಿದ ಬಳಿಕ ಶೌಚಾಲಯಕ್ಕೆ ತೆರಳಿದ್ದರು. ಮತಕೇಂದ್ರ ಮುಚ್ಚುವ ವೇಳೆ ಅವರ ಸಹಿ ಬೇಕಿತ್ತು, ಈ ವೇಳೆ ಅವರು ವಾಪಸ್ ಮರಳದೇ ಇರುವುದನ್ನು ಕಂಡು ಚುನಾವಣಾ ಸಿಬ್ಬಂದಿ ಹುಡುಕಾಡಿದ್ದಾರೆ.

ಆಗ ಅವರು ಶೌಚಾಲಯದಲ್ಲಿ ಕುಸಿದು ಬಿದ್ದಿರುವುದನ್ನು ಕಂಡು ಕೂಡಲೇ ಸಮೀಪದ ಕೆಇಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!