ಕಾಸರಗೋಡು: ಟ್ರಾನ್ಸ್ ಫಾರ್ಮರ್ ಗೆ ಹತ್ತಿದ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಮೃತ್ಯು
ಕಾಸರಗೋಡು: ಟ್ರಾನ್ಸ್ ಫಾರ್ಮರ್ ಗೆ ಹತ್ತಿದ ವ್ಯಕ್ತಿಯೋರ್ವ ನೋಡು ನೋಡುತ್ತಿದ್ದಂತೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ದಾರುಣ ಘಟನೆ ಶನಿವಾರ ಮಧ್ಯಾಹ್ನ ಕಾಸರಗೋಡಿನ ಕಾಞಂಗಾಡ್ ನಲ್ಲಿ ನಡೆದಿದೆ.
ಉದಯ (45) ಮೃತ ದುರ್ದೈವಿ.
ಉದಯ ಅವರು ಕೊಟ್ಟಚ್ಚೇರಿ ಪೇಟೆಯಲ್ಲಿ ಗೂಡಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರು ಜನರು ನೋಡುತ್ತಿದ್ದಂತೆ ಕೊಟ್ಟಚ್ಚೇರಿ ಪೇಟೆಯ ಟ್ರಾನ್ಸ್ ಫಾರ್ಮರ್ ಗೆ ಹತ್ತಿದ್ದಾರೆ. ಬಳಿಕ ಉದಯ ಅವರಿಗೆ ವಿದ್ಯುತ್ ತಂತಿ ಸ್ಪರ್ಶಿಸಿದ್ದು, ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.
ಸ್ಥಳದಲ್ಲಿ ನೆರೆದಿದ್ದವರು ತಕ್ಷಣ ಅವರನ್ನು ಆಸ್ಪತ್ರೆಗೆ ತಲಪಿಸದರೂ ಅದಾಗಲೇ ಮೃತಪಟ್ಟಿದ್ದರು. ಕೊಟ್ಟಯಂ ನಿವಾಸಿಯಾಗಿದ್ದ ಉದಯ ಕೆಲ ವರ್ಷಗಳಿಂದ ಕೊಟ್ಟಚ್ಚೇರಿಯಲ್ಲಿ ವಾಸವಾಗಿದ್ದರು. ಇನ್ನು ಈ ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಹೊಸದುರ್ಗ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





