September 26, 2026

ಟ್ಯಾಕ್ಟರ್ ಗೆ ಸಿಲುಕಿ 7 ವರ್ಷದ ಬಾಲಕ ಮೃತ್ಯು

0
image_editor_output_image-763847288-1716028998719.jpg

ಚಾಮರಾಜನಗರ: ಬಾಲಕನೋರ್ವ ಟ್ಯಾಕ್ಟರ್ ರೊಟೋವೇಟರ್‌ಗೆ ಆಕಸ್ಮಿಕವಾಗಿ ಸಿಲುಕಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಮೃತ ಬಾಲಕನನ್ನು ಚಾಮರಾಜನಗರ ತಾಲೂಕಿನ ಕಾಗಲವಾಡಿ ಗ್ರಾಮದ ಕಾರ್ತಿಕ್ ಎಂಬವರ ಪುತ್ರ ಭವೀಶ್(7) ಎಂದು ಗುರುತಿಸಲಾಗಿದೆ.

 

ಈತ ಬೇಸಿಗೆ ರಜೆ ನಿಮಿತ್ತ ದೇವರಸನಹಳ್ಳಿಯ ಅಜ್ಜಿ ಮನೆಗೆ ತೆರಳಿದ್ದ. ತನ್ನ ಅಜ್ಜಿಯ ಜಮೀನಿನಲ್ಲಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್‌ನಲ್ಲಿ ಚಾಲಕನ ಜತೆಗೆ ಕುಳಿತಿದ್ದ ಬಾಲಕ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದಾನೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!