ನೀರು ಎಂದು ಭಾವಿಸಿ ಆ್ಯಸಿಡ್ ಕುಡಿದು 6 ವರ್ಷದ ಬಾಲಕ ಸಾವು
ಇಂದೋರ್: ನೀರು ಎಂದು ಭಾವಿಸಿ ಆ್ಯಸಿಡ್ ಕುಡಿದು ಆರು ವರ್ಷದ ಬಾಲಕ ಸಾವನ್ನಪ್ಪಿದ ದಾರುಣ ಘಟನೆ ಇಂದೋರ್‌ನಲ್ಲಿ ಬೆಳಕಿಗೆ ಬಂದಿದೆ.
ಮಖಾನ್ (6) ಮೃತಪಟ್ಟ ಬಾಲಕ, ಆ್ಯಸಿಡ್ ಕುಡಿದು ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಮನೆಯನ್ನು ಸ್ವಚ್ಛವಾಗಿಡಲು ಮಗುವುನಿ ತಂದೆ ಆ್ಯಸಿಡ್ ತಂದಿಟ್ಟಿದ್ದರು ಎನ್ನಲಾಗಿದೆ. ಬಂಗಾಂಗದಲ್ಲಿ ವಾಸವಾಗಿರುವ ಕೈಲಾಶ್ ಅಹಿರ್ವಾರ್ ಅವರ ಮಗು ನೀರು ಎಂದು ಆಕಸ್ಮಿಕವಾಗಿ ಆ್ಯಸಿಡ್ ಸೇವಿಸಿದೆ.
ಪರಿಣಾಮ 6 ವರ್ಷದ ಮಖಾನ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದಾರೆ. ಆದರೆ ಒಂದು ವಾರಕ್ಕೂ ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ