May 6, 2026

ಬಂಟ್ವಾಳದ ಅಲ್ಲಲ್ಲಿ ಭಾರೀ ಗಾಳಿ ಮಳೆ: ಪುಣಚ, ವಿಟ್ಲಪಡ್ನೂರು, ವೀರಕಂಭ ಸಹಿತ ವಿವಿಧೆಡೆ ಮನೆಗಳಿಗೆ ಹಾನಿ

0
image_editor_output_image772269762-1715583496771.jpg

ಬಂಟ್ವಾಳ: ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಅಲ್ಲಲ್ಲಿ ಮನೆಗಳಿಗೆ ಹಾನಿಯಾಗಿರುವುದು ವರದಿಯಾಗಿದೆ.

ಪುಣಚ ಗ್ರಾಮದ ನಾರ್ಣಡ್ಕ ಎಂಬಲ್ಲಿ ವಾಸು ನಾಯ್ಕ್ ಅವರ ಮನೆಗೆ ಮರಬಿದ್ದು ಹಾನಿಯಾಗಿದೆ.

ವೀರಕಂಭ ಗ್ರಾಮದ ಮಜಿ ನಿವಾಸಿ ಸರೋಜಿನಿ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ‌.

ವಿಟ್ಲಪಡ್ನೂರು ಗ್ರಾಮದ ಕೋಡಪದವು ಎಂಬಲ್ಲಿರುವ ಸರಕಾರಿ ಶಾಲೆಯ ಕಟ್ಟಡದ ಮೇಲ್ಚಾವಣಿಗೆ ಹಾನಿಯಾಗಿದ್ದು, ಸಾವಿರಾರು ರೂ. ನಷ್ಟ ಸಂಭವಿಸಿದೆ.

ಅಳಿಕೆ ಗ್ರಾಮದ ಚೆಂಡುಲ ನಿವಾಸಿ ಹನೀಫ್ ಎಂಬವರ ಮನೆಗೆ ಮರಬಿದ್ದು ಹಾನಿಯಾಗಿರುವ ಘಟನೆ ನಡೆದಿದೆ. ಕೆಲವು ಕಡೆಗಳಲ್ಲಿ ಮಳೆನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಯಲ್ಲಿ ನೀರು ನಿಂತ ದೃಶ್ಯಾವಳಿಗಳು ಕಂಡುಬಂದಿದೆ.

Leave a Reply

Your email address will not be published. Required fields are marked *

error: Content is protected !!