ವ್ಯಕ್ತಿಯನ್ನು ಕೊಲೆಗೈದು ಕಾರಿನಲ್ಲಿಟ್ಟು ಬೆಂಕಿ
ಕಲಬುರಗಿ: ಕಲ್ಲಿನಿಂದ ಜಜ್ಜಿ, ಬಳಿಕ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿ ವ್ಯಕ್ತಿಯೋರ್ವನನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ಮೂಲದ ರವಿಕುಮಾರ್(45) ಕೊಲೆಯಾದ ವ್ಯಕ್ತಿ. ಆರೋಪಿ ವಿಜಯ್ ಕುಮಾರ್ ಪತ್ನಿ ಜೊತೆ ಮೃತ ವ್ಯಕ್ತಿ ಅನೈತಿಕ ಸಂಬಂಧ ಹೊಂದಿದ್ದ.
ಈ ಹಿನ್ನಲೆ ಮೊದಲು ರವಿಕುಮಾರ್ನನ್ನು ಕೊಂದು ಬಳಿಕ ತನ್ನ ಪತ್ನಿ ನೀಲಮ್ಮಳ ಕೊಲೆಗೂ ಯತ್ನಿಸಿದ್ದಾನೆ.





