September 8, 2024

ಬಂಟ್ವಾಳ: ಮಟ್ಕಾ ಜೂಜಾಟ ಕೃತ್ಯದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳ ಬಂಧನ: ರಸ್ತೆಯಲ್ಲಿ ಓಡಾಡುವ ವಾಹನಗಳ ನೋಂದಣಿ ಸಂಖ್ಯೆಗಳ ಆಧಾರದಲ್ಲಿ ಪತ್ತೆ ಹಚ್ಚಿದ ಪೊಲೀಸರು

0

ಬಂಟ್ವಾಳ : ಸಾರ್ವಜನಿಕ ರಸ್ತೆಯಲ್ಲಿ ಓಡಾಡುವ ವಾಹನಗಳ ನೋಂದಣಿ ಅಂಕೆ-ಸಂಖ್ಯೆಗಳ ಅಧಾರದಲ್ಲಿ, ಮಟ್ಕಾ ಜೂಜಾಟ ಕೃತ್ಯದಲ್ಲಿ ತೊಡಗಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬಂಟ್ವಾಳ ತಾಲೂಕು ಬಿ.ಕಸಬಾ ಗ್ರಾಮದ ಬಡ್ಡಕಟ್ಟೆ ಎಂಬಲ್ಲಿ ನಡೆದಿದೆ.

ದಿನಾಂಕ: 27-04-2024 ರಂದು ಮಧ್ಯಾಹ್ನ, ಸಾರ್ವಜನಿಕ ರಸ್ತೆಯಲ್ಲಿ ಓಡಾಡುವ ವಾಹನಗಳ ನೋಂದಣಿ ಅಂಕೆ-ಸಂಖ್ಯೆಗಳ ಅಧಾರದಲ್ಲಿ, ಮಟ್ಕಾ ಜೂಜಾಟ ಕೃತ್ಯದಲ್ಲಿ ತೊಡಗಿದ್ದ ಪಾಣೆಮಂಗಳೂರು ಗ್ರಾಮ, ಬಂಟ್ವಾಳ ನಿವಾಸಿ ಗುರುರಾಜ್ (32) ಹಾಗೂ ಕುಂಜತ್ತೂರು, ಮಂಜೇಶ್ವರ, ಕೇರಳ ನಿವಾಸಿ ಚಿದನ್ (40) ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ರಾಮ ಕೃಷ್ಣ ಪಿ ಎಸ್ ಐ (ಕಾ&ಸು) ಬಂಟ್ವಾಳ ನಗರ ಠಾಣೆರವರು ಹಾಗೂ ಸಿಬ್ಬಂದಿಗಳು, ಆರೋಪಿಗಳಿಂದ‌ ಮಟ್ಕಾ ಚೀಟಿ ವ್ಯವಹಾರದಿಂದ ಪಡೆದ ರೂ. 2,240/- ನಗದು ಹಣ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ:- 82/2024, ಕಲಂ: 78 ಕೆ ಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!