September 24, 2026

ಉಳ್ಳಾಲ: ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಕುಂಪಲ ನಿವಾಸಿ ಹೃದಯಾಘಾತದಿಂದ ನಿಧನ

0
image_editor_output_image1655304149-1790247443615

ಉಳ್ಳಾಲ: ಪವಿತ್ರ ಚಾರ್ ಧಾಮ್ ಯಾತ್ರೆಗಾಗಿ ಉತ್ತರಾಖಂಡಕ್ಕೆ ತೆರಳಿದ್ದ ಉಳ್ಳಾಲ ತಾಲೂಕಿನ ಕುಂಪಲದ ನಿವಾಸಿಯೊಬ್ಬರು ಯಮುನೋತ್ರಿಯಲ್ಲಿ ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ  ಅಕಾಲಿಕ ಮರಣ ಹೊಂದಿದ್ದಾರೆ. ಕುಂಪಲ ವಿದ್ಯಾನಗರ ನಿವಾಸಿ ರಾಜೇಶ್ ಗಾಣಿಗ (53) ಮೃತಪಟ್ಟ ದುರದೃಷ್ಟಕರ ಯಾತ್ರಿಕರಾಗಿದ್ದಾರೆ.

ರಾಜೇಶ್ ಅವರು ಸೆಪ್ಟೆಂಬರ್ 18ರಂದು ಉಳ್ಳಾಲದ 14 ಮಂದಿ ಸಹಯಾತ್ರಿಕರೊಂದಿಗೆ ಮಂಗಳೂರಿನಿಂದ ರೈಲು ಮುಖಾಂತರ ಚಾರ್ ಧಾಮ್ ಯಾತ್ರೆಗೆ ತೆರಳಿದ್ದರು. ಉತ್ತರ ಭಾರತದ ಹಲವು ಪವಿತ್ರ ಧಾರ್ಮಿಕ ಕ್ಷೇತ್ರಗಳ ದರ್ಶನ ಮುಗಿಸಿ, ಸೋಮವಾರ ಉತ್ತರಾಖಂಡ ತಲುಪಿ ಕೊಠಡಿಯೊಂದರಲ್ಲಿ ತಂಗಿದ್ದರು.

ಮಂಗಳವಾರ ಬೆಳಿಗ್ಗೆ ಉತ್ತರಾಖಂಡದ ಯಮುನೋತ್ರಿಯ ಗಿರಿ ಶಿಖರಗಳಲ್ಲಿ ಸುಮಾರು 7 ಕಿಲೋಮೀಟರ್ ದೂರದ ಪಾದಯಾತ್ರೆ ಪೂರ್ಣಗೊಳಿಸಿದ್ದ ರಾಜೇಶ್, ದೇವಸ್ಥಾನದ ಆವರಣದ ಕುರ್ಚಿಯಲ್ಲಿ ಕುಳಿತಿದ್ದಾಗ ಏಕಾಏಕಿ ಕುಸಿದುಬಿದ್ದಿದ್ದಾರೆ. ತಕ್ಷಣವೇ ಜೊತೆಯಲ್ಲಿದ್ದವರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!