May 21, 2024

ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ: ತಾಯಿಯ ಜಗಳ ಪುತ್ರಿಯ ಕೊಲೆಯಲ್ಲಿ ಅಂತ್ಯ

0

ಬೆಂಗಳೂರು: ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ ಮತ್ತು ಮಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. )

ಬೆಂಗಳೂರಿನ ಬನಶಂಕರಿ ಶಾಸ್ತ್ರಿನಗರದ 3ನೇ ಕ್ರಾಸ್ನಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ದ್ವಿತೀಯ ಪಿಯುಸಿಯಲ್ಲಿ ಸಾಹಿತಿ ಪಾಸ್ ಆಗಿದ್ದಾಳೆ. ಆದರೆ ಕಡಿಮೆ ಅಂಕ ಬಂದಿದೆ ಎಂದು ಪುತ್ರಿ ಜತೆ ತಾಯಿ ಪದ್ಮಜಾ ವಾಗ್ವಾದ ಮಾಡಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಮಗಳನ್ನು ತಾಯಿ ಪ್ರಶ್ನೆ ಮಾಡಿದ್ದಾಳೆ.

ಈ ವಿಚಾರಕ್ಕೆ ತಾಯಿ ಮತ್ತು ಮಗಳ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಸೋಮವಾರ ಇದೇ ವಿಚಾರಕ್ಕೆ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿದೆ. ತಾಯಿ ಪದ್ಮಜಾಗೆ 4-5 ಕಡೆ ಸಾಹಿತಿ ಚಾಕುವಿನಿಂದ ಇರಿದರೆ, ತಾಯಿ ಕೂಡ ಮಗಳು ಸಾಹಿತಿ ಮೇಲೆ ಪ್ರತಿದಾಳಿ ಮಾಡಿ ಕೊಲೆಯೇ ಮಾಡಿದ್ದಾಳೆ.ಸದ್ಯ ಪದ್ಮಜಾ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!