ಸುಳ್ಯ: ಮನೆಯಲ್ಲಿ ನಡೆದ ಸಮಾರಂಭದ ತ್ಯಾಜ್ಯಗಳನ್ನು ರಸ್ತೆ ಬದಿಗೆ ಎಸೆದ ಕುಟುಂಬ:
ದಂಡ ವಿಧಿಸಿ, ಅವರಿಂದಲೇ ತ್ಯಾಜ್ಯ ವಿಲೇವಾರಿ ಮಾಡಿದ ಗ್ರಾ.ಪಂ
ಸುಳ್ಯ: ಮನೆಯಲ್ಲಿ ನಡೆದ ಸಮಾರಂಭದ ತ್ಯಾಜ್ಯವನ್ನು ರಸ್ತೆ ಬದಿ ಎಸೆದ ಕುಟುಂಬಕ್ಕೆ 7000 ರೂಪಾಯಿ ದಂಡ ವಿಧಿಸಿ,
ತ್ಯಾಜ್ಯವನ್ನು ಅವರಿಂದಲೇ ವಿಲೇವಾರಿಗೊಳಿಸಿದ ಘಟನೆ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತ್ತಿಲ ಎಂಬಲ್ಲಿ ಬೆಳ್ಳಾರೆ ಗ್ರಾಮದ ಪುತ್ತಿಲ ಎಂಬಲ್ಲಿ ನಡೆದಿದೆ.
ಡಿ.07ರಂದು ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತ್ತಿಲ ಎಂಬಲ್ಲಿ ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಎಂಬಲ್ಲಿರುವವರು ತಮ್ಮ ಮನೆಯಲ್ಲಿ ಕಾರ್ಯಕ್ರಮವೊಂದು ನಡೆದಿತ್ತು.
ಈ ಕಾರ್ಯಕ್ರಮದ ಊಟದ ತಟ್ಟೆ, ಗ್ಲಾಸ್ ಮತ್ತು ಇನ್ನಿತ್ತರ ತ್ಯಾಜ್ಯ ವಸ್ತುಗಳನ್ನು ಸುಮಾರು 8 ಬ್ಯಾಗ್ ಗಳಲ್ಲಿ ತುಂಬಿಸಿ ಐವರ್ನಾಡು ಗ್ರಾಮದ ಪುತ್ತಿಲದ ಮುಖ್ಯ ರಸ್ತೆ ಬದಿಯಲ್ಲಿ ಅದೇ ರಾತ್ರಿ ಬಿಸಾಡಿದ್ದರು.
ಡಿ.8ರಂದು ಈ ಬಗ್ಗೆ ಸಾರ್ವಜನಿಕರು ಈ ಬಗ್ಗೆ ಪಂಚಾಯತ್‌ಗೆ ದೂರು ನೀಡಿದ್ದರು. ದೂರಿನ ಮೇರೆಗೆ ಸ್ಥಳ ಪರಿಶೀಲಿಸಿದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮಪ್ರಸಾದರವರು ಬೀಸಾಡಿದ ಬ್ಯಾಗುಗಳನ್ನು ಪರಿಶೀಲಿಸಿದ್ದರು.
ನಂತರ ಡಿ.07 ರಂದು ಕಾರ್ಯಕ್ರಮಗಳಿದ್ದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಎಂಬಲ್ಲಿ ಮನೆಯಲ್ಲಿ ನಡೆದ ಕಾರ್ಯಕ್ರಮದ ಊಟದ ತಟ್ಟೆ, ಗ್ಲಾಸ್ ಮತ್ತು ರಸ್ತೆಯಲ್ಲಿ ಬಿಸಾಕಿದ ಊಟದ ತಟ್ಟೆ ಮತ್ತು ಗ್ಲಾಸ್ ಗಳಿಗೆ ಹೋಲಿಕೆಯಾಗುತ್ತಿತ್ತು.
ಈ ಬಗ್ಗೆ ವಿಚಾರಿಸಿದಾಗ ತ್ಯಾಜ್ಯವನ್ನು ಬಿಸಾಡಿದವರು ತಾವೇ ಎಂದು ಒಪ್ಪಿಕೊಂಡು ಸ್ಥಳಕ್ಕೆ ಬಂದು ತ್ಯಾಜ್ಯವನ್ನು ತಾವೇ ವಿಲೇವಾರಿಗೊಳಿಸುವುದಾಗಿ ಒಪ್ಪಿ ಗ್ರಾಮ ಪಂಚಾಯತ್ ಕಛೇರಿಯಲ್ಲಿ 7000 ರೂಪಾಯಿ ದಂಡ ಪಾವತಿಸಿ ತ್ಯಾಜ್ಯವನ್ನು ವಿಲೇವಾರಿಗೊಳಿಸಿದ್ದಾರೆ.
ಈ ಸಂದರ್ಭ ಗ್ರಾಮ ಪಂಚಾಯತ್ ಅಧ್ಯಕ್ಷರು ಬಾಲಕೃಷ್ಣ ಕಿಲಾಡಿ ಹಾಗೂ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಶಾಂತರಾಮ ಕಣಿಲೆಗುಂಡಿ ಹಾಗೂ ಪಂಚಾಯತ್ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದರು.




