February 1, 2026

ದೆಹಲಿ: ರೋಹಿನಿ ಕೋರ್ಟ್ ನಲ್ಲಿ ಸ್ಫೋಟ:
ಓರ್ವ ಸಿಬ್ಬಂದಿಗೆ ಗಾಯ

0
image_editor_output_image437856990-1639045010004

ದೆಹಲಿ: ರಾಷ್ಟ್ರ ರಾಜಧಾನಿಯ ರೋಹಿಣಿ ಕೋರ್ಟ್‌ನಲ್ಲಿ ಗುರುವಾರ ಬೆಳಿಗ್ಗೆ ಲಘು ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸಿಬ್ಬಂದಿಗೆ ಗಾಯವಾಗಿದೆ.

ಸ್ಫೋಟದ ಹಿನ್ನೆಲೆಯಲ್ಲಿ ರೋಹಿಣಿ ಕೋರ್ಟ್ ಆವರಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಕಮಾಂಡೋಗಳು ಸ್ಥಳಕ್ಕೆ ತಲುಪಿದ್ದಾರೆ. ಸ್ಫೋಟದ ಸ್ವರೂಪವನ್ನು ಪರೀಶೀಲಿಸಲು ಹಾಗೂ ಪುರಾವೆಗಳನ್ನು ಕಲೆ ಹಾಕಲು ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ಧಾವಿಸಿದೆ.

ಸ್ಫೋಟ ಹೇಗೆ ಸಂಭವಿಸಿತು?
ರೋಹಿಣಿ ಕೋರ್ಟ್‌ನ ಚೇಂಬರ್ ಸಂಖ್ಯೆ 102ರಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಕಾರಣ ಇನ್ನೂ ತಿಳಿದು ಬಂದಿಲ್ಲ. ಲ್ಯಾಪ್‌ಟಾಪ್ ಬ್ಯಾಟರಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!