February 1, 2026

ವಿಟ್ಲ: ರೋಯಲ್ & ಸ್ಪೈಸಿ ಒಡಂಬಡಿಕೆಯಲ್ಲಿ: ಸ್ಪೈಸಿ ರೆಸ್ಟೋರೆಂಟ್ ಮುಂಭಾಗ ವಿವಿಧ ವಿನ್ಯಾಸದ ರೋಯಲ್ ಕೇಕ್ ಗಳು

0
image_editor_output_image2103300536-1639047996456

ವಿಟ್ಲ: ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ಕಾರ್ಯಾಚರಿಸುತ್ತಿರುವ ರೋಯಲ್ ಬೇಕರಿ ಇದರ ಸಹಸಂಸ್ಥೆ “ರೋಯಲ್ ಕೇಕ್” ವಿಟ್ಲ-ಪುತ್ತೂರು ರಸ್ತೆಯ ಸ್ಪೈಸಿ ಹೋಟೆಲ್ ಮುಂಭಾಗದಲ್ಲಿ ಗುರುವಾರ ಉದ್ಘಾಟನೆಗೊಂಡಿತು.

ರೋಯಲ್ ಕೇಕ್ ಉದ್ಘಾಟಿಸಿದ ನಿವೃತ್ತ ಯೋಧ ದಯಾನಂದ ನೆತ್ರಕೆರೆ ಅವರು ಸಂಸ್ಥೆಯು ಯಶಸ್ವಿಯಾಗಲು ನಾಗರಿಕರ ಸಹಕಾರ ಮುಖ್ಯ. ಈ ನಿಟ್ಟಿನಲ್ಲಿ ರೋಯಲ್ ಕೇಕ್ ಗೆ ನಾವೆಲ್ಲಾ ಜೊತೆಯಾಗೋಣ ಎಂದು ಹೇಳಿದರು.

ಮುಖ್ಯ ಅತಿಥಿ ವಿಟ್ಲ ಜೇಸಿಐ ಪೂರ್ವಾಧ್ಯಕ್ಷರಾದ ರಶೀದ್ ವಿಟ್ಲ ಮಾತನಾಡಿ “ರೆಸ್ಟೋರೆಂಟ್ ಮುಂಭಾಗದಲ್ಲಿ ವಿವಿಧ ಫ್ಲೇವರ್ ಮತ್ತು ವಿನ್ಯಾಸದ ಕೇಕ್ ಮಾರಾಟ ಮಾಡುವ ಈ ಹೊಸ ಕಾನ್ಸೆಪ್ಟ್ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ರೋಯಲ್ ಕೇಕ್ ಮತ್ತು ಸ್ಪೈಸಿ ರೆಸ್ಟೋರೆಂಟ್ ನ ಉತ್ಪನ್ನಗಳು ವಿಟ್ಲ ಸುತ್ತಮುತ್ತಲ ಜನತೆಯ ಮನೆ ಮಾತಾಗಿದೆ ಎಂದು ಹೇಳಿದರು.

ಸ್ಟೈಲ್ ಪಾರ್ಕ್ ಮಾಲಕರಾದ ಆರ್.ಕೆ. ಅಬ್ದುಲ್ಲ ಹಾಜಿ, ರೋಯಲ್ ಬೇಕರಿ ಮಾಲಕರಾದ ದಾವೂದ್, ರಾಝಿಕ್, ಸ್ಪೈಸಿ ರೆಸ್ಟೋರೆಂಟ್ ಮಾಲಕರಾದ ಮೋನುಚ್ಚ, ವಿಟ್ಲ ಬಝಾರ್ ನ ಉಬೈದ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭ ರೋಯಲ್ ಬೇಕರಿಯ ಒಂದನೇ ವರ್ಷದ ಪೋಸ್ಟರ್ ಹಾಕಿ ವಾಟ್ಸಪ್ ಸ್ಟೇಟಸ್ ವಿಜೇತರಾದ ವಿವೇಕ್ ಪುತ್ತೂರು ಹಾಗೂ ರಫೀಕ್ ಸಾಲೆತ್ತೂರು ಅವರಿಗೆ ಸ್ಮರಣಿಕೆ ನೀಡಲಾಯಿತು.

ರೋಯಲ್ ಕೇಕ್ ನಲ್ಲಿ ಫ್ರೆಶ್ ಕೇಕ್ಸ್, ಕಪ್ ಕೇಕ್ಸ್, ಪೇಸ್ಟ್ರೀಸ್, ಡಿಸರ್ಟ್ಸ್, ಡುನಟ್ಸ್ ಮೊದಲಾದವು ಇವೆ. ಉದ್ಘಾಟನೆ ಪ್ರಯುಕ್ತ ಅರ್ಧ ಕೆಜಿ ಕೇಕ್ ಖರೀದಿಗೆ 2 ಜಾರ್ ಕೇಕ್ ಉಚಿತ ಹಾಗೂ ಒಂದು ಕೆಜಿ ಕೇಕ್ ಗೆ 4 ಜಾರ್ ಕೇಕ್ ಉಚಿತವಾಗಿ ನೀಡಲಾಗುತ್ತದೆ. ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆ ತನಕ ಉಚಿತ ಡೋರ್ ಡೆಲಿವೆರಿ ವ್ಯವಸ್ಥೆಯಿದ್ದು, 9731354180/9110485305/9980768370 ನಂಬ್ರವನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

error: Content is protected !!