July 3, 2026

ಸೇನಾ ಹೆಲಿಕಾಪ್ಟರ್ ಪತನ: ಬ್ಲ್ಯಾಕ್ ಬಾಕ್ಸ್ ಪತ್ತೆ

0
clipboard26-1059041-1639029493.jpg

ದೆಹಲಿ: ತಮಿಳುನಾಡಿನ ಕೂನೂರು ಬಳಿಯ ನೀಲಗಿರಿ ಅರಣ್ಯದಲ್ಲಿ ಬುಧವಾರ ಸಂಭವಿಸಿದ ಸೇನಾ ಹೆಲಿಕಾಪ್ಟರ್‌ ಅಪಘಾತದಲ್ಲಿ ಮಡಿದವರ ಬಗ್ಗೆ ರಾಜ್ಯ ಸಭೆಯಲ್ಲಿ ಮಾಹಿತಿ ನೀಡಿದರು. ಅವರ ನಿಧನಕ್ಕೆ ಇಂದು ಸಂತಾಪ ಸೂಚಿಸಲಾಯಿತು.


ತಮಿಳುನಾಡಿನ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದ ವೇಳೆ ನಾಪತ್ತೆಯಾಗಿದ್ದ ಬ್ಲ್ಯಾಕ್ ಬಾಕ್ಸ್ ಸತತ ಕಾರ್ಯಾಚರಣೆ ಬಳಿಕ ಪತ್ತೆಯಾಗಿದೆ. ಈ ಬ್ಲ್ಯಾಕ್ ಬಾಕ್ಸ್ ನಿಂದ ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣ ಏನೆಂಬ ಮಾಹಿತಿ ಬಹಿರಂಗವಾಗಲಿದೆ.

40 ಯೋಧರ ತಂಡ ನೀಲಗಿರಿ ದಟ್ಟಾರಣ್ಯದಲ್ಲಿದ್ದ ಬ್ಲ್ಯಾಕ್ ಬಾಕ್ಸ್ ಪತ್ತೆಹಚ್ಚಿದ್ದು, ಇದರಲ್ಲಿ ಹೆಲಿಕಾಪ್ಟರ್ ಪತನದ ವಿವರ ಇರಲಿದೆ. ಈ ಸೀಕ್ರೇಟ್ ಬಾಕ್ಸ್ ನಲ್ಲಿ ಕೊನೆಯ ಕ್ಷಣಗಳ ಮಾಹಿತಿ, ಪೈಲೆಟ್ ಮಾತು, ಹೆಲಿಕಾಪ್ಟರ್ ವೇಗದ ಮಾಹಿತಿ ಸಂಗ್ರಹವಾಗಿರಲಿದೆ.

ತಮಿಳುನಾಡಿನ ಕುನೂರ್​​ನಲ್ಲಿ ನಿನ್ನೆ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್​ ಹಾಗೂ ಅವರ ಪತ್ನಿ ಸೇರಿದಂತೆ 13 ಮಂದಿ ಮಂದಿ ಮೃತಪಟ್ಟಿದ್ದರು.

ಇದೀಗ ವೆಲ್ಲಿಂಗ್‌ಟನ್‌ ಸೇನಾ ಕ್ಯಾಂಪ್‌ನಲ್ಲಿ ಬಿಪಿನ್‌ ರಾವತ್‌ ಸೇರಿ 13 ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಲಾಯಿತು. ನಂತರ ದೆಹಲಿಗೆ ಪಾರ್ಥಿವ ಶರೀರ ಕೊಂಡೊಯ್ಯಲಾಗುತ್ತದೆ.

Leave a Reply

Your email address will not be published. Required fields are marked *

You may have missed

error: Content is protected !!