March 23, 2026

ಚಿಕ್ಕಮಗಳೂರು: ಶಾರ್ಟ್ ಸರ್ಕೀಟ್‌ಗೆ ಹೊತ್ತಿ ಉರಿದ ಕರ್ಣಾಟಕ ಬ್ಯಾಂಕ್ ATM:5 ಲಕ್ಷ ಹಣ ಭಸ್ಮ..!

0
image_editor_output_image-265376392-1713765777860

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ನಗರದ ಐಜಿ ರಸ್ತೆಯ ಸಾರಗೋಡು ಆರ್ಕೆಡ್​ನಲ್ಲಿರುವ ಕರ್ಣಾಟಕ ಬ್ಯಾಂಕ್ ಎಟಿಎಂ ನಲ್ಲಿ ಅಗ್ನ ಅವಘಡ ಸಂಭವಿಸಿದ್ದು ಎಟಿಎಂ ನಲ್ಲಿದ್ದ 5 ಲಕ್ಷ ಹಣ ಭಸ್ಮವಾಗಿದೆ.

ಜೊತೆಗೆ 15 ಲಕ್ಷ ಮೌಲ್ಯದ ಎಟಿಎಂ ಯಂತ್ರ ಕೂಡ ಸಂಪೂರ್ಣ ಭಸ್ಮವಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ  ಈ ಎಟಿಎಂಗೆ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಎಟಿಎಂಗೆ ಬೆಂಕಿ ಹೊತ್ತಿಕೊಂಡ  ಮಾಹಿತಿಯನ್ನು ಹೈದರಾಬಾದ್ ಬ್ಯಾಂಕ್ ಕಂಟ್ರೋಲ್ ರೂಮ್  ಅಗ್ನಿಶಾಮಕ ದಳಕ್ಕೆ ರವಾನಿಸಿದೆ. ಕೂಡಲೆ ಸ್ಥಳಕ್ಕೆ ಧಾವಿಸಿದ ಚಿಕ್ಕಮಗಳೂರು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.ಆದರೆ ಅದಾಗಲೇ  ನಗದು ಸಹಿತ ಎಟಿಎಂ ಮಷೀನ್ ಸುಟ್ಟು ಕರಕಲಾಗೆ.  ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!