ವಿಟ್ಲ: ಹೊರೈಝನ್ ಸ್ಕೂಲ್, ವಾರ್ಷಿಕ ಮಹಾಸಭೆ: ಅಧ್ಯಕ್ಷರಾಗಿ ಅಝೀಝ್ ಸನ ಪುನರಾಯ್ಕೆ
ವಿಟ್ಲ: ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ನ ವಾರ್ಷಿಕ ಮಹಾಸಭೆಯು ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿ ಅಬೂಬಕರ್ ನೋಟರಿ ವಾರ್ಷಿಕ ಲೆಕ್ಕಪತ್ರ ಹಾಗೂ ವರದಿ ಮಂಡಿಸಿದರು. ಈ ಸಂದರ್ಭ ಶಾಲೆಯ ಅಭಿವೃದ್ಧಿ ಬಗ್ಗೆ ಚರ್ಚ ಮಾಡಲಾಯಿತು. ಮುಂದಿನ ಒಂದು ವರ್ಷದ ವರೇಗೆ ಇದೇ ಸಮಿತಿಯನ್ನು ಮುಂದುವರಿಸುವುದಾಗಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಶಾಲಾ ಅಧ್ಯಕ್ಷ ಅಝೀಝ್ ಸನ ಪ್ರಾಸ್ತಾವಿಕ ಭಾಷಣ ಮಾಡಿದರು.
ಶಾಲೆಯ ಸಲಹೆಗಾರ ವಿ.ಎಚ್.ಅಶ್ರಫ್, ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್, ಜೊತೆ ಕಾರ್ಯದರ್ಶಿ ಇಕ್ಬಾಲ್ ಹಳೆಮನೆ, ಕೋಶಾಧಿಕಾರಿ ಅಂದುಞಿ ಗಮಿ, ಟ್ರಸ್ಟಿಗಳಾದ ಝುಬೈರ್ ಮಾಸ್ಟರ್, ಇಕ್ಬಾಲ್ ಶೀತಲ್, ಅಬ್ದುಲ್ ಹಮೀದ್ ಬದ್ರಿಯಾ, ಅಬ್ದುಲ್ ರಹಿಮಾನ್ ದೀಪಕ್, ಇಸಾಕ್ ಸಾಹೇಬ್, ಮಸೀದಿಯ ಉಪಾಧ್ಯಕ್ಷ ಮಹಮ್ಮದ್ ಗಮಿ, ಕೋಶಾಧಿಕಾರಿ ಶರೀಫ್ ಪೊನ್ನೋಟು, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಸದಸ್ಯ ಇಸ್ಮಾಯಿಲ್ ಪರ್ತಿಪ್ಪಾಡಿ ಮುಂತಾದವರು ಉಪಸ್ಥಿತರಿದ್ದರು.




