March 23, 2026

ಯುವಕನ ಕಿರುಕುಳ‌ ತಾಳಲಾರದೇ ಬಾಲಕಿ ಆತ್ಮಹತ್ಯೆ

0
image_editor_output_image1340562344-1713257013679.jpg

ಕೊಪ್ಪಳ: ಕೊಪ್ಪಳದ‌ ಉಚ್ಚಲಕುಂಟ ಗ್ರಾಮದಲ್ಲಿ ಯುವಕನ ಕಿರುಕುಳ‌ ತಾಳಲಾರದೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಪುರುಷೋತ್ತಮ ಎನ್ನುವ ಯುವಕ ಪೂಜಾಳ‌ ಮನೆಯ ಮೊಬೈಲ್ಗೆ ಕರೆ ಮಾಡುತ್ತಿದ್ದ. ಬೇರೊಂದು ನಂಬರ್ ಮೂಲಕ‌‌ ಹಲವು ಬಾರಿ ಕಾನ್ಫರೆನ್ಸ್ ಕಾಲ್ ಮಾಡಿ ಕಿರುಕುಳ‌ ನೀಡುತ್ತಿದ್ದ.

ಯುವಕನ ಕಿರುಕುಳ‌ ತಾಳಲಾರದೇ ಎಪ್ರಿಲ್ 7 ರಂದು ಪೂಜಾ ವಿಷ ಸೇವಿಸಿದ್ದಳು ಎಂದು ಪೋಷಕರು ಆರೋಪಿಸಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಪೂಜಾ ಸಾವನ್ನಪ್ಪಿದ್ದಾಳೆ. ಈ ಹಿನ್ನೆಲೆಯಲ್ಲಿ ಆರೋಪಿ ಪುರಷೋತ್ತಮನ ಬಂಧನಕ್ಕೆ‌ ಆಗ್ರಹಿಸಿರುವ ಉಚ್ಚಲಕುಂಟ ಗ್ರಾಮಸ್ಥರು ಪೊಲೀಸ್ ಠಾಣೆ ಎದುರು ಬಾಲಕಿಯ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!