March 23, 2026

ಶಿಕಾರಿಪುರದಲ್ಲೇ ಅಪ್ಪ – ಮಕ್ಕಳ ಶಿಕಾರಿ ಮಾಡುತ್ತೇನೆ: ಕೆ.ಎಸ್ ಈಶ್ವರಪ್ಪ

0
image_editor_output_image-1570963197-1713256510571.jpg

ಶಿವಮೊಗ್ಗ: ಹಿರಿಯ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಮತ್ತೆ ಬಿಎಸ್ವೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಿಕಾರಿಪುರದಲ್ಲೇ ಅಪ್ಪ – ಮಕ್ಕಳ ಶಿಕಾರಿ ಮಾಡುತ್ತೇನೆ ಎಂದು ಕೆ.ಎಸ್ ಈಶ್ವರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ವಿಜಯೇಂದ್ರನ ಪುಕ್ಸಟ್ಟೆ ಮಾತುಗಳಿಗೆ ನಾನು ಬೆಲೆ ಕೊಡಲ್ಲ. ರಾಜ್ಯಾಧ್ಯಕ್ಷ ಆಗಿರುವುದಕ್ಕೆ ನಿನಗೇನು ಯೋಗ್ಯತೆ ಇದೆ. ನಲವತ್ತು ವರ್ಷ ಪಕ್ಷಕ್ಕಾಗಿ ನಾನು ಶ್ರಮ ಹಾಕಿದ್ದೇನೆ. ನಿಮ್ಮಪ್ಪನ ಶ್ರಮದಿಂದ ನೀನು ರಾಜ್ಯಾಧ್ಯಕ್ಷನಾಗಿದ್ದೀಯಾ.ಈ ರೀತಿ ಮಾತಾಡೋಕೆ ನಿನಗೆ ಯೋಗ್ಯತೆ ಇಲ್ಲ” ಎಂದು ತಿರುಗೇಟು ನೀಡಿದರು

Leave a Reply

Your email address will not be published. Required fields are marked *

error: Content is protected !!