February 3, 2026

ದೊಣ್ಣೆಯಿಂದ ಭಕ್ತರಿಗೆ ಹಲ್ಲೆ ನಡೆಸಿದ ಅರ್ಚಕ: ವೀಡಿಯೊ ವೈರಲ್

0
image_editor_output_image340682724-1713246911325.jpg

ಹರಿದ್ವಾರ: ದೇವಸ್ಥಾನದಲ್ಲಿ ವಾಹನ ಪಾರ್ಕಿಂಗ್ ವಿಚಾರದಲ್ಲಿ ಅರ್ಚಕರು ಹಾಗೂ ದೇವಸ್ಥಾನದ ಭಕ್ತರ ನಡುವೆ ಗಲಾಟೆ ನಡೆದ ಘಟನೆ ಉತ್ತಾರಖಂಡದ ಹರಿದವಾರದಲ್ಲಿರುವ ಸಿದ್ಧಪೀಠ ಶ್ರೀ ದಕ್ಷಿಣ ಕಾಳೀ ಮಂದಿರದಲ್ಲಿ ನಡೆದಿದೆ.

ಹರಿದ್ವಾರದಲ್ಲಿನ ಮಂದಿರದಲ್ಲಿ ಈ ಘಟನೆ ನಡೆದಿದ್ದು ಗಲಾಟೆ ಹಿಂಸಾತ್ಮಕವಾಗಿ ನಡೆದಿದ್ದು ಅದರ ವಿಡಿಯೋ ವೈರಲ್ ಆಗಿದೆ.

ಅರ್ಚಕರು ಮತ್ತು ದೇವಸ್ಥಾನದ ಸಿಬ್ಬಂದಿಗಳು ಭಕ್ತರನ್ನು ದೊಣ್ಣೆಯಿಂದ ಥಳಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶದ ಸಹರಾನ್ ಪುರದಿಂದ ಬಂದಿದ್ದ ಭಕ್ತರು ಪಾರ್ಕಿಂಗ್ ಶುಲ್ಕದ ವಿಚಾರದಲ್ಲಿ ತಗಾದೆ ತೆಗೆದಿದ್ದರು. ಈ ವಿಚಾರದಲ್ಲಿ ಅರ್ಚಕರು ಹಾಗೂ ಭಕ್ತರ ನಡುವೆ ಗಲಾಟೆ ಆರಂಭವಾಗಿತ್ತು.

ಬಳಿಕ ಅದು ಹಿಂಸಾತ್ಮಕ ರೂಪ ತಾಳಿದ್ದು, ದೊಣ್ಣೆಯಿಂದ ಭಕ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಗಲಾಟೆಯಲ್ಲಿ ಹಲವರು ಭಕ್ತರು ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಾರೆ. ಸ್ಥಳಕ್ಕೆ ಆಗಮಿಸಿದ ಘಾಟ್ ಚೌಕಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!