RCB ತಂಡವನ್ನು ಬೇರೆ ಮಾಲಕರಿಗೆ ಮಾರಾಟ ಮಾಡಿ ಎಂದ ಖ್ಯಾತ ಟೆನ್ನಿಸ್ ಆಟಗಾರ
ಬೆಂಗಳೂರು: 17ನೇ ಸೀಸನ್ ನ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಯಲ್ ಆಗಿ ಆಡುವುದನ್ನೇ ಮರೆತಿದೆ.
ಸೋಮವಾರ ರಾತ್ರಿ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಸೋಲನುಭವಿಸಿದೆ. ಆಡಿದ ಏಳು ಪಂದ್ಯಗಳಲ್ಲಿ ಆರನ್ನು ಸೋತಿರುವ ಫಾಫ್ ಪಡೆಯು ನಿರ್ಗಮನದ ಬಾಗಿಲಲ್ಲಿ ಬಂದು ನಿಂತಿದೆ.
ಖ್ಯಾತ ಟೆನ್ನಿಸ್ ತಾರೆ ಮಹೇಶ್ ಭೂಪತಿ ಅವರು ತಮ್ಮ ಕೋಪ ತೋಡಿಕೊಂಡಿದ್ದು, ಆರ್ ಸಿಬಿ ತಂಡವನ್ನು ಬೇರೆ ಮಾಲೀಕರಿಗೆ ಮಾರಾಟ ಮಾಡಿ ಎಂದಿದ್ದಾರೆ.