May 6, 2026

ಫೋನ್ ರಿಪೇರಿ ಮಾಡಿಸಿಕೊಡಲು ನಿರಾಕರಿಸಿದ ಪೋಷಕರು: ಮನನೊಂದ ಯುವತಿ ಆತ್ಮಹತ್ಯೆ

0
image_editor_output_image-845533279-1712990158738.jpg

ನವದೆಹಲಿ: ಫೋನ್ ರಿಪೇರಿ ಮಾಡಿಸಿಕೊಡಲು ಪಾಲಕರು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಜೈಪುರ ಮಂಡಲದ ವಲ್ಲಲ ಗ್ರಾಮದಲ್ಲಿ ನಡೆದಿದೆ.

ಸೈಶುಮಾ (19) ಸೂಸೈಡ್‌ ಮಾಡಿಕೊಂಡ ಯುವತಿ. ಮಂಚೇರಿಯಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ಆಕೆ ಬಳಸುತ್ತಿದ್ದ ಸ್ಮಾರ್ಟ್ಫೋನ್ ಕೆಟ್ಟು ಹೋಗಿತ್ತು.

ಇದೇ ದುಃಖದಲ್ಲಿದ್ದ ಸೈಶುಮಾ ಎಲ್ಲರೂ ಹೊರಗೆ ತೆರಳಿದ ಬಳಿಕ ಮನೆಯಲ್ಲೇ ಉಳಿದುಕೊಂಡಿದ್ದಳು. ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮಗಳ ಸ್ಥಿತಿಯನ್ನು ನೋಡಿದ ಪಾಲಕರು ಆಘಾತದಿಂದ ಕುಸಿದುಬಿದ್ದಿದ್ದಾರೆ. ಮಗಳ ಸಾವಿನ ದುಃಖ ತಾಳಲಾರದೇ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!