May 6, 2026

ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಢಿಕ್ಕಿ: ಕಾರಿನಲ್ಲಿದ್ದ ನಾಲ್ವರು ಮೃತ್ಯು

0
image_editor_output_image-814636724-1712989293244.jpg

ವಿಜಯಪುರ: ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ವಿಜಯಪುರ ಮೂಲದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅರ್ಜುನ ಕುಶಾಲಸಿಂಗ್ ರಜಪೂತ (32), ರವಿನಾಥ ಪತ್ತಾರ (52), ಪುಷ್ಪಾ ರವಿನಾಥ ಪತ್ತಾರ (40), ಮೇಘರಾಜ ರಜಪೂತ (12) ಮೃತ ದುರ್ದೈವಿಗಳು.

KA 28 D 1021 ಸಂಖ್ಯೆಯ ಕಾರಿನಲ್ಲಿ ನಾಲ್ವರು ವಿಜಯಪುರದಿಂದ ಜಮಖಂಡಿಯಲ್ಲಿರುವ ದೇವಸ್ಥಾನಕ್ಕೆ ಹೊರಟಿದ್ದರು.

ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಜಮಖಂಡಿಯಿಂದ ವಿಜಯಪುರಕ್ಕೆ ಬರುತ್ತಿತ್ತು. ಅರ್ಜುಣಗಿ ಗ್ರಾಮದ ಬಳಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!