ಆಟವಾಡುತ್ತಿದ್ದಾಗ ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕ: ಮುಂದುವರಿದ ರಕ್ಷಣಾ ಕಾರ್ಯ
ಮಧ್ಯಪ್ರದೇಶ: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಆರು ವರ್ಷದ ಬಾಲಕನೊಬ್ಬ ಕೊಳವೆ ಬಾವಿಗೆ ಬಿದ್ದಿದ್ದಾನೆ.
ಬಾಲಕ ಕೊಳವೆ ಬಾವಿಗೆ ಬಿದ್ದಿರುವ ವಿಚಾರ ತಿಳಿಯುತ್ತಲೇ ಬಾಲಕನ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಶುಕ್ರವಾರ ಮಧ್ಯಾಹ್ನ ಆರು ವರ್ಷದ ಬಾಲಕ ಮಯೂರ್ ತನ್ನ ಇತರ ಸ್ನೇಹಿತರ ಜೊತೆ ಗದ್ದೆಯಲ್ಲಿ ಆಟವಾಡುವ ವೇಳೆ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದಾನೆ ಈ ವಿಚಾರವನ್ನು ಆತನ ಜೊತೆಗಿದ್ದ ಇತರ ಬಾಲಕರು ಪೋಷಕರ ಬಳಿ ತಿಳಿಸಿದ್ದಾರೆ.
ಅಲ್ಲೇ ಇದ್ದ ಪೋಷಕರು ಬಂದು ನೋಡುವಷ್ಟರಲ್ಲಿ ಮಯೂರ್ ಸುಮಾರು ಅರುವತ್ತು ಅಡಿ ಆಳಕ್ಕೆ ಜಾರಿ ಹೋಗಿರುವುದು ಗೊತ್ತಾಗಿದೆ ಕೂಡಲೇ ಎಚ್ಚೆತ್ತ ಅಲ್ಲಿದ್ದ ಜನ ಪೊಲೀಸರಿಗೆ ಹಾಗೂ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಬಂದ ತಂಡ ಬಾಲಕನ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿದೆ.




