ವಿಟ್ಲ: ಕೋವಿ ಡೆಪಾಸಿಟ್ ನಿಂದಾಗಿ ಕಾಡು ಪ್ರಾಣಿಗಳ ಉಪಟಳದಿಂದ ಕಂಗಾಲಾದ ಕೃಷಿಕ: ಕೋತಿಗಳನ್ನು ಓಡಿಸಲು 112 ತುರ್ತು ಪೊಲೀಸ್ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಯಿಸಿದ ಕೃಷಿಕ
ವಿಟ್ಲ: ಚುನಾವಣಾ ನೀತಿ ಸಂಹಿತೆ ಪ್ರಕಾರ ಕೋವಿ ಡೆಪಾಸಿಟ್ ಮಾಡಿದ್ದ ಹಿನ್ನಲೆ ಅಳಿಕೆ ಗ್ರಾಮದ ಕೃಷಿಕರು ಕಾಡುಹಂದಿ, ಕೋತಿಗಳ ಉಪಟಳದಿಂದ ಕಂಗಾಲಾಗಿದ್ದಾರೆ.
ಮಂಗನ ಕಿರುಕುಳ ತಾಳಲಾರದೇ ಕೃಷಿಕನೋರ್ವ 112 ತುರ್ತು ಪೊಲೀಸರನ್ನೇ ಮಂಗಗಳನ್ನು ಓಡಿಸಲು ತೋಟಕ್ಕೆ ಬರಮಾಡಿಕೊಂಡ ವಿಚಿತ್ರ ಘಟನೆಯೊಂದು ಅಳಿಕೆ ಗ್ರಾಮದ ಬಿಲ್ಲಂಪದವು ಎಂಬಲ್ಲಿ ನಡೆದಿದೆ.
ಅಳಿಕೆ ಗ್ರಾಮದ ಕೃಷಿಕ ಬಿಲ್ಲಂಪದವು ನಿಶಾಂತ್ ಎಂಬವರು ಜಿಲ್ಲಾಧಿಕಾರಿಗೆ ಕರೆ ಮಾಡಿ ಸಮಸ್ಯೆ ವಿವರಿಸಿದರು, 112 ತುರ್ತು ಸಂಖ್ಯೆಗೆ ಕರೆಮಾಡುವಂತೆ ಜಿಲ್ಲಾಧಿಕಾರಿ ಸಲಹೆಯನ್ನು ನೀಡಿದ ಮೇರೆಗೆ ಬಳಿಕ 112 ತುರ್ತು ಸಂಖ್ಯೆಗೆ ಕರೆ ಮಾಡಿದರು. ಕಂಟ್ರೋಲ್ ರೂಂ ಅಧಿಕಾರಿಗಳ ಸೂಚನೆಯಂತೆ ನಿಶಾಂತ್ ರವರ ಮನೆ ಅಂಗಳಕ್ಕೆ 112 ಸಿಬ್ಬಂದಿಗಳು ಬಂದಿದ್ದಾರೆ.
ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಫೊಟೋ ಸಹಿತ ಆಡಿಯೋ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಶಾಂತ್ ಅವರು, ಪ್ರಾಣಿಗಳ ಉಪಟಳ ನಿಯಂತ್ರಿಸಲು ಕೋವಿ ಹೊಂದಿದ್ದು, ಚುನಾವಣಾ ಹಿನ್ನೆಯಲ್ಲಿ ಠಾಣೆಯಲ್ಲಿ ಕೋವಿಯನ್ನು ಡೆಪಾಸಿಟ್ ಇಡಲಾಗಿದೆ. ಕೋವಿಯನ್ನು ಹಿಂತಿರುಗಿಸುವಂತೆ ನ್ಯಾಯಾಲಯ ಆದೇಶ ಇದ್ದರೂ ಕೋವಿ ಸಿಕ್ಕಿರುವುದಿಲ್ಲ ಎಂದಿದ್ದಾರೆ.





