March 17, 2026

ಕಾಣಿಯೂರು ಬಸ್ ನಿಲ್ದಾಣದಲ್ಲಿ ಮೃತದೇಹ ಪತ್ತೆ

0
image_editor_output_image1784976445-1712815276677

ಕಾಣಿಯೂರು: ಕಾಣಿಯೂರು ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಎ.11ರಂದು ನಡೆದಿದೆ. ತಮಿಳುಮೂಲದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಮೋಹನ್ ರಾಜ್ ಎಂಬವರ ಶವ ಎನ್ನಲಾಗಿದ್ದು, ಬುಧವಾರ ರಾತ್ರಿ ವಿಪರೀತ ಮದ್ಯಪಾನ ಮಾಡಿದ ಪರಿಣಾಮ ಅಸ್ವಸ್ಥಗೊಂಡು ಮೃತಪಟ್ಟಿರಬೇಕೆಂದು ಸಂಶಯಪಡಲಾಗಿದೆ.
ಮೋಹನ್ ರಾಜ್ ಅವರು ಸವಣೂರಿನ ಕನಡಕುಮೇರು ಎಂಬಲ್ಲಿ ಮನೆಯೊಂದರಲ್ಲಿ ವಾಸಮಾಡುತ್ತಿದ್ದು, ಚಾರ್ವಾಕ ಗ್ರಾಮದಲ್ಲಿ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

Leave a Reply

Your email address will not be published. Required fields are marked *

You may have missed

error: Content is protected !!