ಎಪ್ರಿಲ್ 13ರಿಂದ ಮಡವೂರ್ ಸಿ.ಎಂ.ಮಖಾಂ ಉರೂಸ್: ಯಶಸ್ವಿಗೊಳಿಸಲು ಅನಿಲಕಟ್ಟೆ ಮಡವೂರ್ ಸಿ.ಎಂ ಎಜುಕೇಶನ್ ಮನವಿ
ವಿಟ್ಲ; ದಕ್ಷಿಣ ಭಾರತದ ಸುಪ್ರಸಿದ್ಧ ಝಿಯಾರತ್ ಕೇಂದ್ರವಾದ ಮಡವೂರ್ ಸಿ.ಎಂ.ಮಖಾಂ ಶರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಸಿ.ಎಂ.ಮಹಮ್ಮದ್ ಅಬೂಬಕರ್ ( ಖ.ಸಿ) ರವರ 34 ನೇ ಉರೂಸ್ ಮುಬಾರಕ್ ಎಪ್ರಿಲ್ 13 ರಿಂದ 17 ರ ವರೇಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಅನಿಲಕಟ್ಟೆ ಮಡವೂರ್ ಸಿ.ಎಂ.ಎಜುಕೇಶನ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್ ನ ಕರ್ನಾಟಕ ಉರೂಸ್ ಪ್ರಚಾರ ಸಮೀತಿ ಕನ್ವೀನರ್ ಸಿ.ಎಚ್.ಇಬ್ರಾಹಿಂ ಮುಸ್ಲಿಯಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉರೂಸ್ ನ ಈ ಸಂದರ್ಭದಲ್ಲಿ ಮಖಾಂ ಝಿಯಾರತ್,ಧ್ವಜಾರೋಹಣ, ಖತಮುಲ್ ಖುರ್‌ಆನ್,ಜಮಮ ಅಸ್ಹರಿಯಾ ಸನದುದಾನ ಸಮ್ಮೇಳನ, ಉಲಮಾ ಸಂಗಮ,ಮಜ್ಲಿಸ್ ನ್ನೂರ್,ಸ್ವಲಾತ್ ವಾರ್ಷಿಕ, 16 ರಂದು ದಿಕ್ರ್ ದುವಾ ಸಮ್ಮೇಳನ, 17 ರಂದು ಅನ್ನದಾನ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ. ಸರ್ವರೂ ಈ ಉರೂಸ್ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಅನಿಲಕಟ್ಟೆ ಮಡವೂರ್ ಸಿ.ಎಂ.ಎಜುಕೇಶನ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್ ನ ಪರವಾಗಿ ಅವರು ವಿನಂತಿಸಿದರು.
ಅನಿಲಕಟ್ಟೆ ಸಿ.ಎಂ.ಮಡವೂರ್ ನ ಜತೆ ಕನ್ವೀನರ್ ಗಳಾದ ಹಸೈನಾರ್ ಮುಸ್ಲಿಯಾರ್,ಇಬ್ರಾಹಿಂ ಝೈನಿ,ಮಾದ್ಯಮ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ ಉಪಸ್ಥಿತರಿದ್ದರು.






