May 6, 2026

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್: ಖತೀಬರಿಗೆ ಸನ್ಮಾನ

0
image_editor_output_image977812696-1712760433560

ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬ ವಿಜೃಂಭಣೆಯಿಂದ ಆಚರಿಸಲಾಯಿತು.
ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು.
ಈದ್ ಸಂಸೇಶ ನೀಡಿದ ಖತೀಬರು “ರಮ್ಝಾನ್ ತಿಂಗಳಲ್ಲಿ ಅನ್ನ ಪಾನೀಯಗಳನ್ನು ತ್ಯಜಿಸಿದಂತೆ ದುಷ್ಚಟಗಳನ್ನು ದೂರ ಮಾಡಬೇಕು. ಸರ್ವ ಕೆಡುಕುಗಳ ಕೀಲಿ ಕೈ ಎನಿಸಿರುವ ಮಾದಕ ವಸ್ತುಗಳ ದಾಸರನ್ನು ಆ ಚಟದಿಂದ ಮುಕ್ತರಾಗಿಸಬೇಕು ಎಂದು ಕರೆ ನೀಡಿದರು.‌ ಉಪವಾಸ ತಿಂಗಳಲ್ಲಿ ಅಳವಡಿಸಿಕೊಂಡ ಸದ್ಗುಣಗಳನ್ನು ಜೀವನಪರ್ಯಂತ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ ಖತೀಬ್ ಉಸ್ತಾದ್ ರನ್ನು ವಿಟ್ಲ ಜಮಾಅತ್ ಹಾಗೂ ಯೂತ್ ವಿಂಗ್ ವತಿಯಿಂದ ಬೀಳ್ಕೊಡಲಾಯಿತು. ಈ ಸಂದರ್ಭ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಉಪಾಧ್ಯಕ್ಷ ಮಹಮ್ಮದ್ ಗಮಿ, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಕೋಶಾಧಿಕಾರಿ ಶರೀಫ್ ಪೊನ್ನೋಟು, ಯೂತ್ ವಿಂಗ್ ಅಧ್ಯಕ್ಷ ರಫೀಕ್ ಪೊನ್ನೋಟು, ಕಾರ್ಯದರ್ಶಿ ನಮೀರ್ ಹಳೆಮನೆ, ಸದಸ್ಯರಾದ ಮಹಮ್ಮದ್ ಅಲಿ, ಆಸಿಫ್ ಶೀತಲ್, ತೌಸೀಫ್, ಅಶ್ರಫ್ ಅಲಿ, ಶಿಹಾಬ್ ಝಾಹಿರ್, ಅಬ್ರಹಾರ್, ಭಾತಿಷ್, ಸೈಝಾದ್ ಶೈನುದ್ದೀನ್, ಶೀತಲ್ ಇಕ್ಬಾಲ್, ವಿ.ಎ.ರಶೀದ್, ಅಂದುಞಿ ಗಮಿ, ಹಮೀದ್ ಬದ್ರಿಯಾ, ಝುಬೈರ್ ಮಾಸ್ಟರ್, ಇಸ್ಮಾಯಿಲ್ ಪರ್ತಿಪ್ಪಾಡಿ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!