ವಿಟ್ಲ: ಪೂರ್ಣತರಾವೀಹ್ ಹಾಗೂ ಕ್ಲಾಸ್ ನಲ್ಲಿ ಭಾಗವಹಿಸಿದ ಐವರು ಮಕ್ಕಳಿಗೆ ಈದ್ ಗಿಫ್ಟ್ ನೀಡಿದ ಉಕ್ಕುಡ ಮಸೀದಿ ಮುದರ್ರಿಸ್..!
ಉಕ್ಕುಡ ಬದ್ರಿಯಾ ಜುಮಾ ಮಸೀದಿಯಲ್ಲಿ ಪ್ರತಿನಿತ್ಯ ರಂಝಾನ್ ಪೂರ್ತಿ ತಿಂಗಳು ಒಂದು ದಿನವೂ ತಪ್ಪಿಸದೇ ಪ್ರಾರಂಭದಿಂದ ಕೊನೆಯ ತನಕ ತರಾವೀಹ್ ನಮಾಝ್ ಹಾಗೂ ನಂತರದ ಆದ್ಯಾತ್ಮಿಕ ತರಗತಿಯಲ್ಲಿ ಭಾಗವಹಿಸಿದ ಐವರು ಪುಟಾಣಿ ಮಕ್ಕಳಿಗೆ ಉಕ್ಕುಡ ಮಸೀದಿ ಮುದರ್ರಿಸ್ ಹಾಫಿಝ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಮಳಲಿ ಅವರು ಈದ್ ದಿನ ಬುಧವಾರ (10-04) ವಿಶೇಷ ಪ್ರಾರ್ಥನೆ ಬಳಿಕ ಈದ್ ಗಿಫ್ಟ್ ನೀಡಿ ಗೌರವಿಸಿದರು.
ಮಕ್ಕಳನ್ನು ಪ್ರಶಂಸಿದ ಮಳಲಿ ಉಸ್ತಾದ್ ಅವರು ಎಳೆಯದರಲ್ಲೇ ಮಕ್ಕಳಲ್ಲಿ ಭೌತಿಕದ ಜೊತೆಗೆ ಧಾರ್ಮಿಕ ಜ್ಞಾನವನ್ನು ನೀಡಬೇಕು. ರಂಝಾನ್ ನಲ್ಲಿ ಮಕ್ಕಳು ತೋರ್ಪಡಿಸಿದ ಆದ್ಯಾತ್ಮಿಕ ಚೈತನ್ಯ ಪ್ರಶಂಸನೀಯ ಎಂದು ಹೇಳಿದರು. ಮಸೀದಿ ಮುಅಝಿನ್ ಅಬ್ದುಲ್ ಹಮೀದ್ ಮದನಿ, ಅಧ್ಯಕ್ಷ ಅಬ್ಬಾಸ್ ಕಲ್ಲಂಗಳ, ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಸಲಾತ್ ಕಮಿಟಿ ಅಧ್ಯಕ್ಷ ಮುನೀರ್ ದರ್ಬೆ, ಮಸೀದಿ ಕಾರ್ಯದರ್ಶಿ ಶರೀಫ್ ಉಕ್ಕುಡ, ಕೋಶಾಧಿಕಾರಿ ಅಬ್ದುಲ್ಲ ಕುಂಞಿ ಉಪಸ್ಥಿತರಿದ್ದರು.
ಅಬ್ಬಾಸ್ ಆಲಂಗಾರ್ ಪುತ್ರ ಮುಹೀನುದ್ದೀನ್, ಲತೀಫ್ ವರಪಾದೆ ಪುತ್ರ ಅಫ್ಸಲ್, ಮಹಮೂದ್ ಪುತ್ರ ಮುಫಾಝ್, ರಝಾಕ್ ಪುತ್ರ ಅಹ್ಮದ್ ರಫಾಝ್, ಹಾಫಿಝ್ ಅಹ್ಮದ್ ಶರೀಫ್ ಸಖಾಫಿ ಪುತ್ರ ಮುಹಮ್ಮದ್ ಸಾಹಿ ಈದ್ ಗಿಫ್ಟ್ ಪಡೆದ ಪುಟಾಣಿಗಳು. ರಂಝಾನ್ ನಲ್ಲಿ ಶಾಲಾ ರಜೆ ಬಳಿಕ ಐದು ಬಾರಿಯ ಇಮಾಮ್ ಜಮಾಅತ್ ನಮಾಝ್, ರಂಝಾನ್ ನಲ್ಲಿ ತಿಂಗಳು ಪೂರ್ತಿ ಹದ್ಡಾದ್, ಇಶಾ ನಮಾಝ್, ತರಾವೀಹ್ ಹಾಗೂ ನಂತರದ ತರಗತಿಯಲ್ಲಿ ಈ ಪುಟಾಣಿಗಳು ಚಾಚೂ ತಪ್ಪದೇ ಭಾಗವಹಿಸಿದ್ದರು.






