ಉಳ್ಳಾಲ: ಕೊಂಡಾಣ ಕ್ಷೇತ್ರದ ಸಿಸಿ ಕ್ಯಾಮೆರಾ ಕದ್ದಿದ್ದ ಕಳ್ಳ ಆಸ್ಪತ್ರೆಗೆ ದಾಖಲು
ಮಂಗಳೂರು: ಕೊಂಡಾಣ ಕ್ಷೇತ್ರ ಸುದ್ದಿಯಾಗಿದ್ದು, ಯುವಕನೊಬ್ಬ ಕೊಂಡಾಣ ಕ್ಷೇತ್ರದ ಸಿಸಿ ಕ್ಯಾಮೆರಾಗಳನ್ನೇ ಕದ್ದು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಆರೋಪಿಯು ಮಾನಸಿಕ ಅಸ್ವಸ್ಥನಾಗಿದ್ದು ಈ ಕೃತ್ಯ ಮಾಡಿದ್ದಾಗಿ ಹೇಳಿರುವ ಪೊಲೀಸರು ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಎ.4ರಂದು ಕ್ಷೇತ್ರದಲ್ಲಿನ 6 ಸಿಸಿ ಕ್ಯಾಮೆರಾಗಳು ಕಳವಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ಅವರು ಉಳ್ಳಾಲ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಕ್ಷೇತ್ರದ ಕಚೇರಿಯಲ್ಲಿದ್ದ ಡಿವಿಆರ್ ಮೂಲಕ ಕಳ್ಳ ಯಾರು ಎಂದು ಪತ್ತೆ ಹಚ್ಚಿದ್ದಾರೆ.
ಕೊಂಡಾಣದ ಬೀರಿ ನಿವಾಸಿ ಶುಭಾಶ್‌ಚಂದ್ರ ಎಂಬಾತ ಈ ಕಳ್ಳತನ ಮಾಡಿರುವುದು ಡಿವಿಆರ್ ಮೂಲಕ ಗೊತ್ತಾಗಿದೆ. ಆರೋಪಿಯನ್ನು ಬಂಧಿಸಿ ಆತನಿಂದ ಸಿಸಿ ಕ್ಯಾಮೆರಾಗಗಳನ್ನು ವಶಕ್ಕೆ ಪಡೆಯಲಾಗಿದೆ.




