March 23, 2026

ಕುಂದಾಪುರ: ಸ್ಕೂಟರ್ ಗೆ ಮಿನಿ ಬಸ್ ಡಿಕ್ಕಿ: ಕೇಬಲ್ ಆಪರೇಟರ್ ಮೃತ್ಯು

0
image_editor_output_image1876787856-1712467698168

ಕುಂದಾಪುರ: ಸ್ಕೂಟರಿಗೆ ಮಿನಿ ಬಸ್ಸೊಂದು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಕೇಬಲ್‌ ಅಪರೇಟರ್‌ ಮೃತಪಟ್ಟ ಘಟನೆ ಕುಂದಾಪುರ ತಲ್ಲೂರಿನಲ್ಲಿ ಶನಿವಾರ ನಡೆದಿದೆ.

ತಲ್ಲೂರು ಗರಡಿ ಸಮೀಪದ ನಿವಾಸಿ ಶೇಖರ್‌ ಪೂಜಾರಿ ಯಾನೆ ಚಂದ್ರಶೇಖರ್‌ ಪೂಜಾರಿ (52) ಮೃತ ದುರ್ದೈವಿ.

ಕಳೆದ ಭಾನುವಾರ ಮಧ್ಯಾಹ್ನ ತಲ್ಲೂರು ಸರ್ಕಲ್‌ ಬಳಿ ಶೇಖರ್‌ ಪೂಜಾರಿ ಅವರ ಸ್ಕೂಟರಿಗೆ ಮಿನಿ ಬಸ್ಸೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ಶೇಖರ್‌ ಪೂಜಾರಿಯವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಹಾಗೂ ಇಬ್ಬರು ಪುತ್ತಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!