May 6, 2026

ಸ್ನೇಹಿತರೊಂದಿಗೆ ಈಜುಲು ಹೋದ ಯುವಕ ನೀರಲ್ಲಿ ಮುಳುಗಿ ಸಾವು

0
image_editor_output_image-971809368-1712274113564.jpg

ಹೊಳೆಹೊನ್ನೂರು: ಸ್ನೇಹಿತರೊಂದಿಗೆ ಈಜುಲು ಹೋದ ಯುವಕನೋರ್ವ ನೀರಲ್ಲಿ ಮುಳುಗಿ ಸಾವಿಗೀಡಾದ ಘಟನೆ ಶ್ರೀ ಕ್ಷೇತ್ರ ಕೂಡಲಿ ಗ್ರಾಮದ ತುಂಗಭದ್ರಾ ಸಂಗಮದಲ್ಲಿ ನಡೆದಿದೆ.

ಶಿವಮೊಗ್ಗ ಅಣ್ಣಾನಗರದ ಸಮಿವುಲ್ಲಾ ಹಾಗೂ ತಸ್ಮಿಯಾ ಬಾನು ಇವರ ಪುತ್ರ ಮುಬಾರಕ್ (18) ಮೃತ ಯುವಕ.ಈತ ಪಟ್ಟಣದ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ.

ಪ್ರತಿನಿತ್ಯ ಶಿವಮೊಗ್ಗದಿಂದ ಪಟ್ಟಣದ ಕಾಲೇಜಿ ವ್ಯಾಸಂಗಕ್ಕೆ ಬರುತ್ತಿದ್ದ ಈತ ಎಂದಿನಂತೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಕೂಡಲಿ ಸಂಗಮದಲ್ಲಿ ಸ್ನಾನ ಮಾಡಲು ಸ್ನೇಹಿತರೊಂದಿಗೆ ತೆರಳಿದಾಗ ಈ ಘಟನೆ ನಡೆದಿದೆ.
ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!