May 6, 2026

ಸುಳ್ಯ: ಹೊಟ್ಟೆನೋವಿನಿಂದ ಬಿಜೆಪಿ ಮುಖಂಡ ಸಾವು

0
image_editor_output_image-1578913592-1712179769008.jpg

ಸುಳ್ಯ : ಏಕಾಏಕಿ ಕಾಣಿಸಿಕೊಂಡ ಹೊಟ್ಟೆನೋವಿನಿಂದ ಅನಾರೋಗ್ಯ ಕಾಡಿ ಬಿಜೆಪಿ ಮುಖಂಡರೊಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದಲ್ಲಿ ನಡೆದಿದೆ.

ಸುಳ್ಯ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಐವತ್ತೊಕ್ಲು ಗ್ರಾಮದ ಮೇಲ್ಪಾಡಿಯ ಚಂದ್ರಶೇಖರ ಮೇಲ್ಪಾಡಿ (35) ಮೃತಪಟ್ಟ ದುರ್ದೈವಿ.

ಮಾ.31 ರಂದು ಮುಂಜಾನೆ ಹೊಟ್ಟೆನೋವು ಬಂದು ತೀವ್ರ ಅನಾರೋಗ್ಯಗೊಂಡ ಅವರನ್ನುಕಡಬ ತಾಲೂಕಿನ ಕಾಣಿಯೂರಿನ ಆಸ್ಪತ್ರೆಗೆ ಕರೆತಂದು ಅಲ್ಲಿನ ವೈದ್ಯರ ಸಲಹೆ ಮೇರೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.

ಆದರೆ ಅಲ್ಲಿ ತಲುಪುವ ವೇಳೆ ಅವರು ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಐವತ್ತೊಕ್ಲು ಗ್ರಾಮದ ಒಂದನೇ ವಾರ್ಡ್ ಬೂತ್ ಅಧ್ಯಕ್ಷನಾಗಿ, ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ತಾಯಿ , ಪತ್ನಿ ಸಹೋದರ ,ಸಹೋದರಿಯನ್ನು ಅಗಲಿದ್ದಾರೆ

Leave a Reply

Your email address will not be published. Required fields are marked *

error: Content is protected !!