ಚಾರ್ಮಾಡಿ ಘಾಟ್ನಲ್ಲಿ ಸಿಕ್ಕಿ ಹಾಕಿಕೊಂಡ ಲಾರಿ: ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್
ಮಂಗಳೂರು : ಚಾರ್ಮಾಡಿ ಘಾಟ್ನಲ್ಲಿ ಲಾರಿಯೊಂದು ಸಿಕ್ಕಿ ಹಾಕಿಕೊಂಡಿದ್ದು, ಕಿಲೋಮೀಟರ್ ಗಂಟೆ ಗಟ್ಟಲೆ ಟ್ರಾಫಿಕ್ ಜಾಂ ಆದ ಘಟನೆ ಗುರುವಾರ ನಡೆದಿದೆ.
ಚಾರ್ಮಾಡಿ ಘಾಟಿಯ 2ನೇ ತಿರುವಿನಲ್ಲಿ ಲಾರಿ ಲಾಕ್ ಆಗಿದ್ದು, ಟರ್ನ್ ಆಗದೇ ನಿಂತು ಹೋಗಿದೆ. ಬೆಳಗ್ಗಿನಿಂದ ಚಾರ್ಮಾಡಿ ಘಾಟಿನಲ್ಲಿ ವಾಹನಗಳು ನಿಂತಲ್ಲೇ ನಿಂತಿದ್ದು ಮುಂದೆಯೂ ಹೋಗಲಾರದೇ, ಹಿಂದೆಯೂ ಬರಲಾಗದೇ ಪರದಾಡುವಂತೆ ಆಗಿದೆ.
ಬಳ್ಳಾರಿಯಿಂದ ಮಂಗಳೂರಿಗೆ ಸರಕುಗಳನ್ನು ತುಂಬಿಸಿಕೊಂಡು ಲಾರಿ ಹೋಗುತ್ತಿತ್ತು. ಘನ ವಾಹನಗಳು ಘಾಟಿಯಲ್ಲಿ ಚಲಿಸಬಾರದು ಎಂದು ಸರ್ಕಾರದ ಅಧಿಕೃತ ಆದೇಶವಿದ್ದರೂ, ಕೂಡ ಪೊಲೀಸರು ಲಾರಿಗಳನ್ನು ಬಿಡುತ್ತಿದ್ದಾರೆ ಎಂದು ಸ್ಥಳೀಯರು ಹಾಗೂ ವಾಹನ ಸವಾರರು ಆರೋಪಿಸಿದ್ದಾರೆ.




