ಕಾಸರಗೋಡು: ಕಬ್ಬಿಣದ ರಾಡ್‌ನಿಂದ ಹೊಡೆದು ತಂದೆಯನ್ನೇ ಕೊಲೆ ಮಾಡಿದ ಪುತ್ರ

ಕಾಸರಗೋಡು: ಕಬ್ಬಿಣದ ರಾಡ್‌ನಿಂದ ಹೊಡೆದು ಮಗನೊಬ್ಬ ತಂದೆಯನ್ನು ಹತ್ಯೆ ಮಾಡಿದ ಘಟನೆ ಸೋಮವಾರ(ಎ.1) ಕಾಸರಗೋಡಿನ ಪಳ್ಳಿಕೆರೆ ಎಂಬಲ್ಲಿ ನಡೆದಿದೆ.
ಪಳ್ಳಿಕೆರೆಯ ಅಪ್ಪು ಕುಂಞ(65) ಕೊಲೆಯಾದ ವ್ಯಕ್ತಿ. ಮಗನಾದ ಪ್ರಮೋದ್ (37)ನ್ನು ಬೇಕಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರತಿ ದಿನವು ಮಗ ತಂದೆಗೆ ಮಾನಸಿಕ ಕಿರುಕುಳ, ಹಿಂಸೆ ಮಾಡುತ್ತಿದ್ದ. ಈ ಬಗ್ಗೆ ಅಪ್ಪು ಕುಂಞ ಮಗನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನು ತಿಳಿದ ಆತ ಸೋಮವಾರ ಸಂಜೆಯ ವೇಳೆ ಕಬ್ಬಿಣದ ರಾಡ್‌ನಿಂದ ಹೊಡೆದು ತಂದೆಯನ್ನು ಕೊಲೆಗೈದಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.